ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಆಶ್ರಯ ಯೋಜನೆ ಮನೆಗಳಿಗೆ ಓಡಾಡುವ ರಸ್ತೆ ಜಾಗದಲ್ಲಿ ಕಾಂಪೌಂಡ್ ಕಟ್ಟುತ್ತಿದ್ದು ಸಾರ್ವಜನಿಕರಿಗೆ ಓಡಾಡಲು ರಸ್ತೆ ಬಿಡಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಪೌರಾಯುಕ್ತರಾದ ಎ ವಾಸೀಂ ರವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕರು ಹೆಗ್ಗೆರೆ ಮಂಜುನಾಥ್ ಮಾತನಾಡಿ 30ನೇ ವಾರ್ಡಿನಲ್ಲಿ ಆಶ್ರಯ ಮನೆಗಳನ್ನು ಕಟ್ಟಿರುವ ಸಾರ್ವಜನಿಕರು ಓಡಾಡುವ ರಸ್ತೆಯನ್ನು ಹೊತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ.
ಜಾಗಕ್ಕಿಂತ ಹೆಚ್ಚು ಜಾಗದಲ್ಲಿ ಅಳತೆಗಿಂತ ಜಾಸ್ತಿ ಕಾಂಪೌಂಡ್ ಕಟ್ಟಿದ್ದು ಆಶ್ರಯ ಕಾಲೋನಿಗೆ ಓಡಾಡಲು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ.
ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಓಡಾಡಲು ರಸ್ತೆ ಬಿಡಿಸಿಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಮಾಡುತ್ತೇವೆ.
ಜಾಗ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘಟನೆಯಿಂದ ಎಚ್ಚರಿಸುತ್ತೇವೆ.
ಜಿಲ್ಲಾ ಪ್ರಧಾನ ಸಂಚಾಲಕರು ಹೆಗ್ಗೆರೆ ಮಂಜುನಾಥ್ ಶಾರದಮ್ಮ ಸರಳಮ್ಮ ಕೆಂಚಮ್ಮ ಕಣ್ಮಕ್ಕ ಶಿವಮ್ಮ ಶೃತಿ ರೇಣುಕಾ ಜಬೀನ ಬಾನು ಶಾಹಿನಾ ಬಾನು ಇದ್ದರು.

