ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ಅತ್ಯಂತ ಹೆಮ್ಮೆಯಿಂದ ಈ ಧ್ವಜವನ್ನು ಹಿಡಿದಿದ್ದೇನೆ. ಭರವಸೆಯಿಂದ ಮತ್ತು ಆತ್ಮವಿಶ್ವಾಸದಿಂದ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸೋಣ. ವೀರ ಯೋಧರಿಗೆ, ಆಪರೇಷನ್ ಸಿಂಧೂರದಲ್ಲಿ ಮೆರೆದ ಕಲಿಗಳಿಗೆ ಮತ್ತು ರಾಷ್ಟ್ರವನ್ನು ರಕ್ಷಿಸುತ್ತಿರುವ ಪ್ರತೀ ಭಾರತೀಯ ಪ್ರಜೆಗೂ ನನ್ನ ಗೌರವ ಸಮರ್ಪಣೆ ಮಾಡುತ್ತೇನೆಂದು ಅವರು ತಿಳಿಸಿದರು.
ನಾನು 79ನೇ ಸ್ವಾತಂತ್ರ್ಯ ದಿನೋತ್ಸವದಂದು ನನ್ನ ಪುತ್ರನೊಂದಿಗೆ ತ್ರಿವರ್ಣ ಧ್ವಜದ ಮುಂದೆ ನಿಂತಾಗ ಸ್ವಾವಲಂಬಿ, ಬಲಿಷ್ಠ ಭಾರತದ ಕನಸುಗಳು, ಸಾಧನೆಗಳ ಜತೆಗೆ ಈ ಮಹಾನ್ ಧ್ವಜದ ಐತಿಹಾಸಿಕ ಮಹತ್ವ, ಅದು ಮೂಡಿಸುವ ಧೈರ್ಯ ಮತ್ತು ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು.
2047ರ ವೇಳೆಗೆ ವಿಕಸಿತ ಭಾರತ ಕನಸು ಸಾಕಾರ ಮಾಡಲು ಪ್ರತಿಯೊಬ್ಬರು ಹೃದಯಪೂರ್ವಕ ಒಟ್ಟಾಗಿ ಕೆಲಸ ಮಾಡೋಣ ಎಂದು ನಿಖಿಲ್ ಕರೆ ನೀಡಿದರು.

