ನಾಯಕ ನಟ ಡಾಲಿ ಧನಂಜಯ್‌ ಕೈ ಹಿಡಿಯಲಿರುವ ದುರ್ಗದ ವೈದ್ಯೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಯಕ ನಟ ಡಾಲಿ ಧನಂಜಯ್‌ ಅವರು ತಾವು ಕೈ ಹಿಡಿಯಲಿರುವ ಕೋಟೆ ನಾಡಿನ ವೈದ್ಯೆಯ ವಿಭಿನ್ನ ರೀತಿಯ ಫೋಟೊಶೂಟ್‌ನಡೆಸಿ ತಮ್ಮ  ಬಾವಿ ಪತ್ನಿಯನ್ನು ಪರಿಚಯಿಸಿದ್ದಾರೆ.

ನಟ ಡಾಲಿ ಧನಂಜಯ್‌ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ ನೀಡಿದ್ದಾರೆ. ಹಲವು ದಿನಗಳ ಮೌನಕ್ಕೆ ತೆರೆ ಎಳೆದಿದ್ದ ಧನಂಜಯ್ ಬೆಳಕಿನ ಹಬ್ಬ ದೀಪಾವಳಿಯಂದು ಬಾಳ ಸಂಗತಿ ವಿಭಿನ್ನ ರೀತಿಯ ಪೋಟೋ ಶೂಟ್ ಗಳೊಂದಿಗೆ ಪರಿಚಯಿಸಿದ್ದಾರೆ.

- Advertisement - 

ಕೋಟೆ ನಾಡು ಚಿತ್ರದುರ್ಗದ ವೈದ್ಯೆ ಡಾ.ಧನ್ಯತಾ ಜತೆಗೆ ಸಪ್ತಪದಿ ತುಳಿಯಲಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಧನ್ಯತಾ ಅವರೊಂದಿಗೆ ಮುಂದಿನ ವರ್ಷ ಫೆಬ್ರವರಿ 16 ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಧನ್ಯತಾ ಹಾಗೂ ಧನಂಜಯ್‌ವಿವಾಹ ನಡೆಯಲಿದೆ. ಸೌತ್ ಸಿನಿಮಾ ಇಂಡಸ್ಟ್ರಿ ತಾರೆಯರು ಹಾಗೂ ಹಲವು ರಾಜಕೀಯ ಗಣ್ಯರು ಡಾಲಿ ಧನಂಜಯ್ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದ್ದು ಡಾಲಿ ಧನಂಜಯ್ ಮತ್ತು ಬಾವಿ ಪತ್ನಿ ಡಾ. ಧನ್ಯತಾ ಅವರ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

- Advertisement - 

Share This Article
error: Content is protected !!
";