ಯಾವ ಪುಣ್ಯಾತ್ಮರ ಕಾಲದಲ್ಲಿ ರಸ್ತೆ ಆಗಲೀಕರಣ ಆಗುವುದೋ?

News Desk


ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.

ಚಂದ್ರವಳ್ಳಿ ನ್ಯೂಸ್, ಹಿರಿಯೂರು:

ಜನರಿಗೆ ಬೇಕಾಗಿರುವುದು ಮೂಲಭೂತ ಸೌಕರ್ಯಗಳು ಮಾತ್ರ ಶ್ರೀರಂಗಪಟ್ಟಣ-ಬೀದರ್ ನಗರದ ಮಧ್ಯೆ ಹಾದು ಹೋಗಿರುವ ರಸ್ತೆ ಅಗಲೀಕರಣ ಜನರಿಗೆ ಕಣ್ಣು ಕುಕ್ಕುವಂತಾಗಿದೆ. ರಸ್ತೆ ಅಕ್ಕಪಕ್ಕದ ಮರಗಳನ್ನು ತೆಗೆದು ಹಾಕಿದರು ರಸ್ತೆ ಕಾಮಗಾರಿ ಏಕೆ ಪ್ರಾರಂಭಿಸುತ್ತಿಲ್ಲ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. 

ಚಿತ್ರದುರ್ಗ ಜಿಲ್ಲೆಯಲ್ಲೇ ಹಿರಿಯೂರು ತಾಲೂಕು ಹಲವು ಕಾರಣಗಳಿಗಾಗಿ ಹೆಸರಾಗಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಕುಂಟಿತವಾಗಿದೆ. ಕಳೆದ ಎರಡು ದಶಕಗಳಿಂದ ರಸ್ತೆ ಹಿರಿಯೂರು ಮುಖ್ಯ ರಸ್ತೆಯ ಅಗಲೀಕರಣ ಮಾಡಲಾಗುತ್ತದೆ ಎನ್ನುವ ಜನಪ್ರತಿನಿಧಿಗಳ ಹೇಳಿಕೆಗಳು, ಗುದ್ದಲಿ ಪೂಜೆ ನಿರಂತರ ಮಾಡಲಿದೆ. ಆದರೆ ರಸ್ತೆ ಅಗಲೀಕರಣ ಎನ್ನುವುದನ್ನು ಜೀವಂತವಾಗಿಟ್ಟು ಎಲ್ಲ ರಾಜಕಾರಣಿಗಳು ಬೇಳೆ ಬೆಯಿಸಿಕೊಂಡಿರುವುದು ಮಾತ್ರ ವಿಪರ್ಯಾಸ.

2018-2023 ಅವಧಿಯ ಕೊನೆಯಲ್ಲಿ ಅಂದಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಹುಳಿಯಾರ್ ರಸ್ತೆ ಅಗಲೀಕರಣ ಚಾಲನೆ ನೀಡಿದ್ದರು. ಇನ್ನೇನು ರಸ್ತೆ ಅಗಲೀಕರಣಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಆಗಲಿದೆ ಎನ್ನುವಷ್ಟರಲ್ಲಿ ನೆನೆಗುದಿಗೆ ಬಿದ್ದಿತು.
ಈಗ ಮತ್ತೇ ಹುಳಿಯಾರ್ ರಸ್ತೆ ಆಗಲೀಕರಣ ಮಾಡುವ ಉದ್ದೇಶ ಇಟ್ಟುಕೊಂಡು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹುಳಿಯಾರ್ ರಸ್ತೆ ಅಗಲೀಕರಣದ ಗುದ್ದಲಿ ಪೂಜೆ ಮಾಡಿದರು. ಅದರ ಹಿಂದೆಯೇ ಟಿ.ಬಿ.ಸರ್ಕಲ್ ನಿಂದ ತಾಲೂಕು ಕಚೇರಿ ತನಕ ದೊಡ್ಡ ದೊಡ್ಡ ಮರಗಳನ್ನು ಕಡಿದು ತೆರವುಗೊಳಿಸಿದರು. ಮರೆಗಳನ್ನ ಕಡಿದಿದ್ದೇ ದೊಡ್ಡ ಸುದ್ದಿ ಮತ್ತು ಸಾಧನೆ ಆಯಿತು. ಅಲ್ಲಿಂದ ಇಲ್ಲಿ ತನಕ ರಸ್ತೆ ಅಗಲೀಕರಣದ ಮಾತುಗಳೇ ಕೇಳಿ ಬರುತ್ತಿಲ್ಲವಾದ್ದರಿಂದ ಸಾರ್ವಜನಿಕರು ರಸ್ತೆ ಅಗಲೀಕರಣ ಯಾವಾಗ ಮಾಡಲಿದ್ದಾರೆ ಎಂದು ತಡಪಡಿಸುತ್ತಿದ್ದಾರೆ.
ಹಿರಿಯೂರು ಟಿ.ಬಿ.ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ ಹುಳಿಯಾರ್ ರಸ್ತೆಯಲ್ಲಿ ಸಂಚರಿಸುವುದೇ ಹರಸಹಾಸವಾಗಿದೆ. ದಿನ ದಿನಕ್ಕೆ ಜನಸಂದಣಿ  ಹೆಚ್ಚಾಗುತ್ತಿದೆ. ವಾಹನಗಳ ಸಂಚಾರ ದಟ್ಟಣೆ ಕೂಡ ಮಿತಿ ಮೀರಿದೆ. ಹುಳಿಯಾರ್ ರಸ್ತೆಯಿಂದ ಗಾಂಧಿ ಸರ್ಕಲ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತನಕ ಜೀವ ಕೈಯಲ್ಲಿಡಿದು ವಾಹನ ಸವಾರರು ಸಂಚರಿಸಬೇಕಿದೆ. ಕ್ಷಣ ಕ್ಷಣಕ್ಕೂ  ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಸಾಲದಕ್ಕೆ ಆಟೋ, ಇತರೆ ವಾಹನಗಳ ಅಡಚಣೆ ಹೇಳ ತೀರದು. ಜನರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಹಿಡಿ ಶಾಪ ಹಾಕುತ್ತಿದ್ದಾರೆ.

ಶಾಲೆ-ಕಾಲೇಜ್ ಗಳಿಗೆ ಹೋಗುವ ವಿದ್ಯಾರ್ಥಿಗಳು ಟ್ರಾಫಿಕ್ ಸಮಸ್ಯೆಯಿಂದ ಅರ್ಧ ಗಂಟೆ ಮುಂಚಿತವಾಗಿ ಮನೆಯಿಂದ ಶಾಲೆಗೆ ಹೊರಡುಬೇಕಾಗುತ್ತದೆ ಈ ಸಮಸ್ಯೆಗೆ ಪರಿಹಾರ ಯಾವಾಗ ಎಂಬುದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾಲು ಸಾಲಾಗಿ ಉಳಿದು ಬಿಟ್ಟಿದೆ.

ಸಂಘ ಸಂಸ್ಥೆಗಳು ಸಾರ್ವಜನಿಕರು ಸಾಕಷ್ಟು ಹೋರಾಟ ಮಾಡಿ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿದ್ದರೂ ಸಂಬಂಧಿಸಿದವರು ಗಮನ ನೀಡುತ್ತಿಲ್ಲ.

ಇನ್ನೇನು ರಸ್ತೆ ಅಗಲೀಕರಣ ಆಗಿಯೇ ಬಿಡುತ್ತೆ ಅಂದುಕೊಂಡರೆ ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿಗೆ ಯಾವಾಗ ಚಾಲನೆ ಸಿಗಬಹುದು, ಟ್ರಾಫಿಕ್ ಸಮಸ್ಯೆ ಬಗೆ ಹರಿಯುವುದು ಯಾವಾಗ, ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ಮಾಡಿದ್ದು ಕನಸೋ ಅಥವಾ ಭ್ರಮೆಯೋ ಎಂಬುದು ಜನರನ್ನು ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.

ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಿಂದ ಬೈಕ್ ಆಟೋ ಸವಾರರು ಸಾರ್ವಜನಿಕರು ವಿದ್ಯಾರ್ಥಿಗಳು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಈ ರಸ್ತೆಯ ಅಗಲೀಕರಣ ಯಾವ ಪುಣ್ಯಾತ್ಮನ  ಕೈಯಲ್ಲಿ ಪೂರ್ಣಗೊಳ್ಳುವುದೋ ಕಾದು ನೋಡಬೇಕಾಗಿದೆ. 

ಹಿರಿಯೂರು ನಗರದ ಟಿಬಿ ವೃತ್ತದಿಂದ ಗಾಂಧಿ ಸರ್ಕಲ್ ಮಾರ್ಗವಾಗಿ ಹುಳಿಯಾರ್ ರಸ್ತೆ ಮತ್ತು ಸಾರ್ವಜನಿಕರ ಆಸ್ಪತ್ರೆ ಮುಂಭಾಗದ ರಸ್ತೆಯೇ ಪ್ರಧಾನ ರಸ್ತೆ ಮತ್ತು ಪ್ರಮುಖ ರಸ್ತೆಯಾಗಿದ್ದು ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವಂತೆ ಸಾರ್ವಜನಿಕರು ಪ್ರತಿಭಟನೆ ಮೆರವಣಿಗೆ ನಡೆಸಿದ್ದರೂ ಉಪಯೋಗ ಆಗಿಲ್ಲ. ನಗರದೊಳಗಿನ ಆಸ್ಪತ್ರೆಗೆ ಬರುವುದು ತುಂಬಾ ಕಷ್ಟಕರವಾಗಿದೆ. ಕೂಡಲೇ ರಸ್ತೆ ಅಗಲೀಕರಣ ಮಾಡಿ ಟ್ರಾಫಿಕ್ ಸಮಸ್ಯೆ ಹೋಗಲಾಡಿಸಬೇಕು. ನಾಗಭೂಷಣ್, ನಿವಾಸಿ, ಹಿರಿಯೂರು. 

ರಸ್ತೆ ಅಗಲೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಬೇಗ ಚಾಲನೆ ನೀಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು ಕ್ಷೇತ್ರದ ಶಾಸಕರ ಮಹತ್ವದ ಕೆಲಸ. ಕುಂಟು ನೆಪಗಳನ್ನು ಹೇಳಿಕೊಂಡು ರಸ್ತೆ ಅಗಲೀಕರಣ ಮಾಡದಿರುವುದು ಕ್ಷೇತ್ರದ ಜನರಿಗೆ ಮಾಡಿದ ದ್ರೋಹ ಆಗಲಿದೆ. ಭಾಗ್ಯಮ್ಮ, ಹುಳಿಯಾರ್ ರಸ್ತೆ ನಿವಾಸಿ.

- Advertisement -  - Advertisement - 
Share This Article
error: Content is protected !!
";