ದಸರೆ ದಶ ದೋಷವಾ ಹರೆ…..
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಸರೆ
ದಶ ದೋಷವಾ ಹರೆ…..
ಬೆಳಗಲಿ
ನಿಮ್ಮ ಮನೆಯಲಿ
ಬೆಳಕಿನ ದಸರಾ
ಪಸರಿಸಲಿ ಎಲ್ಲೆಡೆ
ಹೃದಯದ ಮಂಥನ
ಹಿರಿಯರು
ಮೆಲುಕು ಹಾಕುವ
ದಸರಾ,ಕಿರಿಯರು
ಸಂಭ್ರಮಿಸುವ
ದಸರಾ
ಮನೆಯಂಗಳದಲಿ
ಬಂದು ನೆಲೆಸುವ
ಚಾಮುಂಡಿ
ನವ ರೂಪದಲಿ ನಿಂತು,
ನಿಮ್ಮ ಕಷ್ಟಗಳ
ಸಂಹರಿಸುವಳು
ಬರಮಾಡಿಕೊಳ್ಳಿ
ಮನೆ,ಮನ ತುಂಬಿಕೊಳ್ಳಿ
ಧರಿಸಿ ಕಂಕಣವ
ಮುಡಿಯಿರಿ ಮಂಗಳದ
ಲಕ್ಷಣವ,
ನಡೆಯಿರಿ
ಪೂಜಿಸಿ ಶಮಿಯ
ಹಂಚಿರಿ ಬಂಗಾರದ
ಬನ್ನಿಯ
ದಸರೆ ,ದಸರೆ
ದಶ ದೋಷವ ಹರೆ
ದಸರೆ ನಿಮ್ಮ ಅಭಿಸ್ಟಗಳನು ಈಡೇರಿಸಲಿ
ಕವಿತೆ-ಗುರಾನಿ, ದಾವಣಗೆರೆ