ರಂಗು ರಂಗಿನಾಟ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಂಗು ರಂಗಿನಾಟ
ರಗಳೆಯ ದಿನಗಳು

ಈಗಿಲ್ಲ ,ಆಗಿನ ಮೋಜು
ಇಲ್ಲವೇ ಇಲ್ಲ

ರಂಗು ಚಲ್ಲಲು
ಪರಿಚಯವೇ ಬೇಕಿರಲಿಲ್ಲ
ಮೈಯಲ್ಲಿ ಹೋಳಿಯ
ಜೋಶ್ ಒಂದಿದ್ದರೆ
ಸಾಕಿತ್ತು,

ಈಗೋ ಹುಡುಗರು ಶರ್ಟ್ ಬಿಚ್ಚಿ ಅರೆಬೆತ್ತಲಾಗಿ
ಹುಡುಗೀರ ಮುಂದೆ
ಡೋಲು ಹೊಡೆಯುತ್ತಾ
ಕುಣಿ ಕುಣಿಯುತಲೇ
ಗುಂಪಲ್ಲೇ ನೀರು,ಬೀರು ಗಂಟಲಿಗಿಳಿಸಿ. ತಾವು ತಾವೇ ಆಚರಿಸುವರು
ಹೋ…ಹೋ….ಹೋಳಿ

ಹೃದಯದ ಒಳ ಬಣ್ಣ
ಹೊರ ಚೆಲ್ಲಿ , ಕೆಡುಕ
ಗೆಲ್ಲುವ, ವಿಷ ಉಗುಳಿ
ಅಮೃತ ಉಕ್ಕಿಸುವ
ಬಿಟ್ಟ ಸಂಬಂಧಗಳ
ಗಟ್ಟಿಗೊಳಿಸುವ
ಹೋ…ಹೋ….ಹೋಳಿ

ಕಣ್ಣು ಹೊಡೆವ ರಂಗಿನ
ಹುಡುಗ ಯಾರೆಂದು ತಿಳಿಯದೆ ಪರಿತಪಿಸುವ
ಹುಡುಗಿಯರು
ಬಚ್ಚನ್ ನ ರಂಗ್ ಬರಸೆ ಗೆ
ತಾಳ ಹಾಕುವ ಹದಿ ಹರೆಯ ದಾಟಿದ ಹೆಂಗಳೆಯರು
The young lady
ರೇಖಾಳನು ನೆನೆಯುತ ಎನುವರು ಹಾಯ್.. ಹಾಯ್. ಹೋಳಿ


We go back to the history
ಕೃಷ್ಣನ ನೀಲಿ ರಂಗು.
ಕಾಲ್ದುಳಿನ ಗುಲಾಬಿ ರಂಗು
ಬಣ್ಣ ಎರಚದೆ ರಾಧೆಯ ಗಲ್ಲ ಕೆಂಪಾಗಿಸಿತು ಎನುವುದ ಬಲ್ಲವರಿಲ್ಲ
ಆದರೂ ಕೃಷ್ಣ 16 ಸಾವಿರ
ನಾರಿಯರ ಮನ ಗೆದ್ದಿದ್ದ.
ಹೋಲಿರೇ ಹೋಲಿ
ರಂಗೋಂಕಿ ಹೋಲಿ

ಬೇಡಿಕೊಂಡರು ನಾರಿಯರು
ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು
ಹೌದಲ್ವ? ಅದೇ
ಈಗಲೂ ನಡೆದಿದೆ
ರೂಪ ಬೇರೆಯಷ್ಟೇ
ಹೋ. … ಹೋ. ಹೋಲಿ

ಹೋಲಿಗಾಗಿ ಕಿಕ್
ಕೊಡುವ ತಮಾಷೆ
ಕವನ ಮೈ ಬಣ್ಣ
ಬದಲಿಸಿ ಓದಿ
ಕವಿತೆ-ಗುಜ್ಜರ್ ದಾವಣಗೆರೆ

 

- Advertisement -  - Advertisement - 
Share This Article
error: Content is protected !!
";