ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಕೆ ಆರ್ ಹಳ್ಳಿ ಗೇಟಿನಲ್ಲಿರುವ ಸಹರಾ ಡಾಬದಲ್ಲಿ ಊಟದ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಹಳ್ಳಿ ಗ್ರಾಮದಲ್ಲಿ ಸೂಕ್ತ ರಕ್ಷಣೆ ಹಾಗೂ ನೆಮ್ಮದಿ ಕಾಪಾಡುವಂತೆ ತಾಲೂಕು ಗೊಲ್ಲ ಸಂಘದ ನೇತೃತ್ವದಲ್ಲಿ ಡಿ ವೈ ಎಸ್ ಪಿ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವೇದಾವತಿ ನಗರದ ಶ್ರೀ ಕೃಷ್ಣ ದೇವಾಲಯದ ಅವರಣದಲ್ಲಿ ಪಕ್ಷಾತೀತವಾಗಿ ಗೊಲ್ಲ ಸಮುದಾಯದ ಮುಖಂಡರು ಶಾಂತಿಯುತ ಸಭೆ ನಡೆಸಿದರು.
ನಂತರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಲಾಯಿತು.
ಮನವಿ ಸಲ್ಲಿಸಿ ನಂತರ ಮಾತನಾಡಿದ ಮುಖಂಡರು ಕೆ ಆರ್ ಹಳ್ಳಿ ಗಲಾಟೆ ಪ್ರಕರಣದಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅಮಾಯಕರನ್ನು ಬಂಧಿಸಬಾರದು ಶಾಂತಿ ಕದಡದಂತೆ ನೋಡಿಕೊಳ್ಳಬೇಕು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಹಳ್ಳಿ ಗೊಲ್ಲರಹಟ್ಟಿಗೆ ಪೊಲೀಸರು ಪದೇ ಪದೇ ಹೋಗುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಎಸ್ಎಸ್ಎಲ್ ಸಿ ಮಕ್ಕಳು ಪರೀಕ್ಷೆ ಬರೆಯದೆ ಭಯಭೀತಗೊಂಡಿದ್ದಾರೆ ಎಂದು ಗೊಲ್ಲ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರು ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ರಕ್ಷಣೆ ನೀಡಬೇಕು. ಜೊತೆಗೆ ಈ ಪ್ರಕರಣದಲ್ಲಿ ಗೊಲ್ಲ ಸಮುದಾಯದ ಪ್ರಕಾಶ್ ಮೇಲೆ ಬಿಸಿ ಟೀ ಚೆಲ್ಲಿ ಗಾಯಗೊಳಿಸಿರುವ ಆರೋಪಿಗಳ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಣ್ಣ, ಮಾಜಿ ನಗರಸಭಾ ಸದಸ್ಯ ಬಿಕೆ ಕರಿಯಪ್ಪ, ತಿಪ್ಪೀರಯ್ಯ, ಕೆ ಅಭಿನಂದನ್, ಟಿ ರಂಗನಾಥ್, ಶಿವಣ್ಣ, ಎಸ್ ಆರ್ ತಿಪ್ಪೇಸ್ವಾಮಿ, ವಿಶ್ವನಾಥ್, ರಂಗಸ್ವಾಮಿ, ಆಲೂರು ತಿಮ್ಮಣ್ಣ, ಕರಿಯಣ್ಣ, ಚಿತ್ರಜಿತ್ ಯಾದವ್, ಹೇಮಂತ್ ಕುಮಾರ್, ಕೃಷ್ಣ ಪೂಜಾರಿ, ನಿರಂಜನ್, ಪಾರ್ಥ, ಗಂಗಾಧರ್ ಹಾಗೂ ಕೆ ಆರ್ ಹಳ್ಳಿ ಗೊಲ್ಲರಹಟ್ಟಿಯ ಮಹಿಳೆಯರು ಉಪಸಿತರಿದ್ದರು.