ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸರ್ಕಾರ ಈ ಖಾತೆ ಮಾಡಿಸಿಕೊಳ್ಳಿ ಎಂದು ಪದೇಪದೇ ಹೇಳುತ್ತಿದೆ, ಆದರೆ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರೆ ಸರ್ವರ್ ಡೌನ್ ಅಥವಾ ದಾಖಲೆ ಕೊಡಿ ಎಂದು ಇಲ್ಲಸಲ್ಲದ ಕಾರಣ ಹೇಳಿ ದಿನಗಳು ಮುಂದಕ್ಕೆ ಆಗುತ್ತಿದ್ದಾರೆ.
ಹೌದು ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಗ್ರಾಮ ಪಂಚಾಯಿತಿ ಮುಂದೆ ಒಂದು ವರ್ಷ ಕಳೆದರೂ ಸಹ ಈ ಖಾತೆ ಮಾಡಿಲ್ಲ ಎಂದು ಕಾರನಾಳ ಗ್ರಾಮದ ಕಾಂಗ್ರೆಸ್ ಮುಖಂಡ ಮಹೇಶ್ ಎಂಬುವರು ಪಂಚಾಯಿತಿಯ ಮುಂದೆ ಕೂತು ನನಗೆ ನ್ಯಾಯ ಬೇಕು ಎಂದು ಧರಣಿ ನಡೆಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರನಾಳ ಗ್ರಾಮದಲ್ಲಿರುವ 50*106 ವಿಸ್ತೀರ್ಣದ ಜಾಗವನ್ನು ಈ ಖಾತೆ ಮಾಡುವಂತೆ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಟ್ಟರು ಸಹ ಒಂದು ವರ್ಷವಾದರೂ ಈ ಖಾತೆ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.