ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಒನ್‍ನಲ್ಲಿ ಇ-ಆಸ್ತಿ, ಮುಟೇಷನ್ ಅರ್ಜಿಗಳನ್ನು ದಾಖಲಿಸಲು ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ಸೃಜನೆ ಮತ್ತು ಹಕ್ಕು ವರ್ಗಾವಣೆ ಮಾಡಲು ಇ-ಆಸ್ತಿ ತಂತ್ರಾಂಶ ಬಳಕೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸುವ ಮತ್ತು ದಾಖಲೆಗಳ ಸ್ಕ್ಯಾನ್ ಮಾಡುವ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಚಿತ್ರದುರ್ಗ ನಗರಸಭೆಯಿಂದ ಅಧಿಕೃತವಾದ ಕರ್ನಾಟಕ ಒನ್ ಕೇಂದ್ರಗಳ ವಿಳಾಸ ಹಾಗೂ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ವಿವರ ಇಂತಿದೆ. ನಗರದ ಎಂ.ಎಸ್.ಬಿ.ಎಂ ರಸ್ತೆ, ಇ ಅಂಡ್ ಟಿ ಕ್ಲೀನಿಕ್ ಮುಂಭಾಗ-9164335550, ಭೀಮಪ್ಪನಾಯಕ ರಸ್ತೆಯ, ಒಕ್ಕಲಿಗರ ಹಾಸ್ಟೆಲ್ ಕಾಂಪ್ಲೆಕ್ಸ್ ಮಳಿಗೆ ಬಾಯ್ಸ್ ಕಾಲೇಜು ಮುಂಭಾಗ-789928692, ಜೆ.ಸಿ.ಆರ್. ಸರ್ಕಲ್ ಮುಖ್ಯರಸ್ತೆ-9060825090, ಚಿಕ್ಕಪೇಟೆ ಉಚ್ಚೆಂಗಿ ಯಲ್ಲಮ್ಮ ದೇವಸ್ಥಾನ ಹತ್ತಿರ-7019552892,
ಜಿಲ್ಲಾ ಕೇಂದ್ರ ಗ್ರಂಥಾಲಯ ಮುಂಭಾಗ-8296151971, ಹೊಳಲ್ಕೆರೆ ರಸ್ತೆ, ಮಾರಮ್ಮ ದೇವಸ್ಥಾನ ಪಕ್ಕ-7019552892, ನಗರಸಭೆ ಮಳಿಗೆ ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ಮುಂಭಾಗ-8861050659, ಹೊಳಲ್ಕೆರೆ ರಸ್ತೆ ನೀಲಕಂಠೇಶ್ವರ ದೇವಸ್ಥಾನದ ಪಕ್ಕ-7019024127, ಬ್ಯಾಂಕ್ ಕಾಲೋನಿ-8553905641, ಹೊಳಲ್ಕೆರೆಗೆ ಹೋಗುವ ಮುಖ್ಯ ರಸ್ತೆ ನೀಲಕಂಠೇಶ್ವರ ದೇವಸ್ಥಾನದ ಹತ್ತಿರ-9449441144 ಗೆ ಸಂಪರ್ಕಿಸಬಹುದು.
ಚಿತ್ರದುರ್ಗ ನಗರಸಭೆಯಿಂದ ಅಧಿಕೃತವಾದ ಕರ್ನಾಟಕ ಒನ್ ಕೇಂದ್ರಗಳಿಗೆ ಇ-ಆಸ್ತಿ ತಂತ್ರಾಂಶದ ಲಾಗಿನ್‍ಗಳನ್ನು ಸೃಜನೆ ಮಾಡಿ, ಅವರುಗಳಿಗೆ ಕಳೆದ ಡಿಸೆಂಬರ್ 05ರಂದು ಇ-ಆಸ್ತಿ, ಮುಟೇಷನ್ ಅರ್ಜಿಗಳನ್ನು ಅಗತ್ಯ ದಾಖಲೆಗಳನ್ನು ಪಡೆದು ಆನ್‍ಲೈನ್‍ನಲ್ಲಿ ದಾಖಲಿಸಲು ತರಬೇತಿ ನೀಡಲಾಗಿದೆ.
ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಇ-ಆಸ್ತಿ ಹಾಗೂ ಮ್ಯುಟೇಶನ್ (ಹಕ್ಕು ವರ್ಗಾವಣೆ) ಅರ್ಜಿಗಳನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜೀಗಳನ್ನು ಸಲ್ಲಿಸಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅವರು ಕೋರಿದ್ದಾರೆ.

