ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪೌಷ್ಠಿಕ ಆಹಾರ ಸೇವಿಸಿ, ರಕ್ತ ಹೀನತೆ ತೊಲಗಿಸಿ ಎಂದು ಐಸಿಎಂಆರ್ ಸಂಯೋಜಕ ಓ.ಉಮೇಶ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸೊಂಡೆಕೆರೆ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಪೌಷ್ಠಿಕ ಆಹಾರ ಶಿಬಿರದಲ್ಲಿ ಅವರು ಮಾತನಾಡಿದರು.
ಆರೋಗ್ಯ ಭಾಗ್ಯಕ್ಕಿಂತ ಬೇರೆ ಯಾವ ಭಾಗ್ಯನೂ ಇಲ್ಲ. ಪೌಷ್ಠಿಕ ಆಹಾರವನ್ನು ಸೇವಿಸಿ ರಕ್ತಹೀನತೆ ತಡೆಗಟ್ಟಿ ಎಂದು ತಿಳಿಸಿದ ಅವರು, ಎದೆಹಾಲಿನ ಮಹತ್ವವನ್ನು ಹಾಡಿನ ಮೂಲಕ ಅರಿವು ಮೂಡಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮದುವೆ ಮಾಡುವುದು ಕಾನೂನು ಬಾಹಿರ. ಈ ವಯಸ್ಸಿನಲ್ಲಿ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ದರಿರುವುದಿಲ್ಲ. ಇದರಿಂದ ತಾಯಿ ಮರಣ ಮತ್ತು ಶಿಶು ಮರಣ ಸಂಭವಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರೋಗ್ಯ ಇಲಾಖೆಯ ಮೊಹಮದ್ ಅನೀಫ್, ತಿಪ್ಪೇಸ್ವಾಮಿ, ನಾಗವೇಣಿ, ಶೃತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು.

