ಮಕ್ಕಳಿಂದ ಪರಿಸರಸ್ನೇಹಿ ಪ್ರಬಂಧ ರಚನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೃಕ್ಷಥಾನ್ ಹೆರಿಟೇಜ್ ರನ್ 2025 ಹಿನ್ನಲೆ: 350ಕ್ಕೂ ಹೆಚ್ಚು ಮಕ್ಕಳಿಂದ ಪರಿಸರಸ್ನೇಹಿ ಪ್ರಬಂಧ ರಚನೆ ಆಯೋಜಿಸಲಾಗಿತ್ತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಡಿಸೆಂಬರ್ 7ರಂದು ಆಯೋಜನೆಯಾಗಿರುವ ವೃಕ್ಷಥಾನ್ ಹೆರಿಟೇಜ್ ರನ್- 2025 ನಿಮಿತ್ತ ಭಾನುವಾರ ಹಸಿರು ವಿಜಯಪುರ’, ‘ಪರಿಸರ ಜಾಗೃತಿ’, ‘ವೃಕ್ಷ ಆಂದೋಲನಪರಿಸರ ಸ್ನೇಹಿ ವಿಷಯಗಳ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

- Advertisement - 

ಗಗನ ಮಹಲ್ ನಲಿ ಜರುಗಿದ ಈ ಸ್ಪರ್ಧೆಯಲ್ಲಿ   ಪ್ರಾಥಮಿಕ, ಪ್ರೌಢ, ಹಾಗೂ ಪಿಯುಸಿ ಸೇರಿದಂತೆ 3 ವಿಭಾಗಗಳಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಟಿ ವೃಕ್ಷ ಅಭಿಯಾನದ ಮೂಲಕ ಕೈಗೊಂಡಿರುವ ಹಸಿರು ಕ್ರಾಂತಿಯಿಂದ ಜಿಲ್ಲೆಯಲ್ಲಿ ಅರಳುತ್ತಿರುವ ಪರಿಸರಸ್ನೇಹಿ ಮನೋಭಾವ ವಿದ್ಯಾರ್ಥಿಗಳ ಬರಹಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು ಎಂದು ಸಚಿವರು ಹೇಳಿದರು.

- Advertisement - 

ಪ್ರಥಮ ಬಹುಮಾನವಾಗಿ ರೂ. 10ಸಾವಿರ, ದ್ವಿತೀಯ-ರೂ. 7 ಸಾವಿರ, ತೃತೀಯ-ರೂ.5ಸಾವಿರ ನಗದು ಬಹುಮಾನಗಳ ಜೊತೆಗೆ 2 ಸಮಾಧಾನಕರ ಬಹುಮಾನಗಳು ಇರಲಿದೆ.  ಶೀಘ್ರದಲ್ಲೇ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.

 

 

Share This Article
error: Content is protected !!
";