ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದಿಂದ ಅನುಷ್ಠಾನಕ್ಕೆ ಬಂದ #NextGenGST ಸುಧಾರಣಾ ಕ್ರಮಗಳಿಂದ ಭಾರತದಲ್ಲಿ ಆರ್ಥಿಕ ಬೆಳವಣಿಗೆ, ಆ ಮೂಲಕ ಜನರಲ್ಲಿನ ಸಮೃದ್ಧಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಪ್ರತಿಯೊಬ್ಬರೂ ದಿನನಿತ್ಯ ಬಳಕೆ ಮಾಡುವ 380ಕ್ಕೂ ಹೆಚ್ಚಿನ ವಸ್ತುಗಳ ಮೇಲಿನ #GST ಕಡಿತದಿಂದ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿ, ಅದು ಶೇ.0.25ಕ್ಕೆ ತಲುಪಿದೆ. ವಾಹನ ಖರೀದಿಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಜನರಲ್ಲಿ ಖರೀದಿ ಶಕ್ತಿ ವೃದ್ಧಿಯಾಗಿರುವುದು ಸಮೃದ್ಧಿಯ ಪ್ರತೀಕ. ತೆರಿಗೆ ಸರಳೀಕರಣದಂತಹ ಜನೋಪಯೋಗಿ ಕ್ರಮದಿಂದ ಕೈಗಾರಿಕೆಗಳಿಗೆ ಕೂಡ ಶಕ್ತಿ ಬಂದಿದೆ ಎಂಬುದನ್ನು ತಜ್ಞರು ಪ್ರತಿಪಾದಿಸಿದ್ದಾರೆ.
ಸುಧಾರಣೆ ಎಂದರೆ, ಕೇವಲ ಒಂದು ಕ್ರಮವಷ್ಟೇ ಅಲ್ಲ. ಅದು ಪರಿವರ್ತನೆಯ ಕಡೆಗೆ ದೃಢ ಹೆಜ್ಜೆ. ಪ್ರಧಾನಿ ಮೋದಿ ಅವರು ಈ ದಿಸೆಯಲ್ಲಿ ಇರಿಸಿರುವ ಹೆಜ್ಜೆಗಳು ಭಾರತೀಯ ಅರ್ಥ ವ್ಯವಸ್ಥೆಗೆ ಚೈತನ್ಯ, ಶಕ್ತಿಯನ್ನು ತುಂಬಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

