ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಹಾಗೂ ಅವರ ಸಹೋದರರ ಮನೆಗಳ ಮೇಲೆ ಶುಕ್ರವಾರ ಬೆಳಗಿನ ಜಾವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಆನ್ಲೈನ್ ಗೇಮ್, ಕ್ಯಾಸಿನೋ ವ್ಯವಹಾರವನ್ನು ಹೊಂದಿದ್ದು, ಇದರಿಂದ ಮಾಹಿತಿ ಪಡೆದ ಇಡಿ ಅಧಿಕಾರಿಗಳು ಬೆಳಗ್ಗೆ 5.30ಕ್ಕೆ ಸುಮಾರು 30 ಹೆಚ್ಚು ಅಧಿಕಾರಿಗಳ ತಂಡ ಇನ್ನೋವಾ ಕಾರುಗಳ ಆಗಮಿಸಿ ದಾಳಿ ನಡೆಸಿದರು. ಸುಮಾರು ಎಂಟು ಗಂಟೆಗೂ ಹೆಚ್ಚು ಕಾಲ ಪರಿಶೀಲನಡೆಸುತ್ತಿದ್ದಾರೆ. ಚಿತ್ರದುರ್ಗ ಶಾಸಕ
ಚಳ್ಳಕೆರೆ ನಿವಾಸ, ಸಹೋದರ ಕೆ.ಸಿ. ನಾಗರಾಜ್ ಮತ್ತು ಕೆ.ಸಿ. ತಿಪ್ಪೇಸ್ವಾಮಿ ಅವರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ. ದಾಖಲೆಗಳ ಪರಿಶೀಲನೆ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.
ಚಿತ್ರದುರ್ಗ ಕ್ಷೇತ್ರದ ಶಾಸಕ, ಕಳೆದ ಹತ್ತಾರು ವರ್ಷಗಳಿಂದ ಕ್ಯಾಸಿನೋ, ಆನ್ಲೈನ್ ಗೇಮಿಂಗ್ ಮುಂತಾದ ವ್ಯವಹಾರಗಳ ತೊಡಗಿಕೊಂಡಿರುವ ಕೆ.ಸಿ.ವೀರೇಂದ್ರ(ಪಪ್ಪಿ), ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಹಾಗೂ ಹಿರಿಯ ಸಹೋದರ ಕೆ.ಸಿ.ನಾಗರಾಜ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಪೊಲೀಸ್ ಇಲಾಖೆಯ ಬಂದೋಬಸ್ತಿನೊಂದಿಗೆ ಇಡಿ ಇಲಾಖೆ ಅಧಿಕಾರಿಗಳು ಮನೆಯೊಳಗೆ ತಪಾಸಣೆ ಕಾರ್ಯವನ್ನು ಸಂಜೆಯಾದರೂ ಮುಂದುವರೆಸಿದ್ಧಾರೆ. ಇಡಿ ಅಧಿಕಾರಿಗಳ ದಾಳಿ ಸಮಯದಲ್ಲಿ ಕೆ.ಸಿ.ವೀರೇಂದ್ರ ಮತ್ತು ಕೆ.ಸಿ.ತಿಪ್ಪೇಸ್ವಾಮಿ ಮನೆಯಲ್ಲಿ ಇರಲಿಲ್ಲ.

