ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘ ಬೆಂಗಳೂರು ಸಂಘದ ರಾಜ್ಯ ಕಾರ್ಯದರ್ಶಿಯಾಗಿ ನಿತ್ಯವಾಣಿ ಕನ್ನಡ ದಿನಪತ್ರಿಕೆ ಸಂಪಾದಕ ಚಿತ್ರದುರ್ಗದ ಎಸ್. ಟಿ.ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಮುಖ್ ಅಬ್ಬಿಗೆರೆ ಮಂಜುನಾಥ್ ತಿಳಿಸಿದ್ದಾರೆ.
ಕಾರ್ಯನಿರತ ದಿನ ಪತ್ರಿಕೆಗಳ ಬೆಳವಣಿಗೆ ದೃಷ್ಠಿಯಿಂದ ಸಂಘವನ್ನು ಸಕರಾತ್ಮಕವಾಗಿ ಸಂಘಟಿಸುವುದು ಸೇರಿದಂತೆ ಪತ್ರಕರ್ತರು, ಸಂಪಾದಕರು, ಪತ್ರಿಕೆಗಳ ಉಳುವಿಗೆ ಕಂಕಣ ಬದ್ಧರಾಗಿ ದುಡಿಯುವಂತೆ ಅವರು ಸೂಚಿಸಿದ್ದಾರೆ.
ಎಸ್. ಟಿ.ನವೀನ್ ಕುಮಾರ್ ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ಎಂ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳಿಗೆ ಚಂದ್ರವಳ್ಳಿ ಪತ್ರಿಕೆಯ ಸಂಪಾದಕರು ಮತ್ತು ಚಂದ್ರವಳ್ಳಿ ಪತ್ರಿಕಾ ಬಳಗವು ಅಭಿನಂದನೆ ಸಲ್ಲಿಸಿದೆ.