ಸಂಪಾದಕ ನವೀನ್ ಕುಮಾರ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕ ಕಾರ್ಯನಿರತ  ದಿನ ಪತ್ರಿಕೆಗಳ ಸಂಪಾದಕರ ಸಂಘ ಬೆಂಗಳೂರು ಸಂಘದ ರಾಜ್ಯ ಕಾರ್ಯದರ್ಶಿಯಾಗಿ ನಿತ್ಯವಾಣಿ ಕನ್ನಡ ದಿನಪತ್ರಿಕೆ ಸಂಪಾದಕ  ಚಿತ್ರದುರ್ಗದ ಎಸ್. ಟಿ.ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಮುಖ್ ಅಬ್ಬಿಗೆರೆ ಮಂಜುನಾಥ್ ತಿಳಿಸಿದ್ದಾರೆ.

- Advertisement - 

ಕಾರ್ಯನಿರತ ದಿನ ಪತ್ರಿಕೆಗಳ ಬೆಳವಣಿಗೆ ದೃಷ್ಠಿಯಿಂದ ಸಂಘವನ್ನು ಸಕರಾತ್ಮಕವಾಗಿ ಸಂಘಟಿಸುವುದು ಸೇರಿದಂತೆ ಪತ್ರಕರ್ತರು, ಸಂಪಾದಕರು, ಪತ್ರಿಕೆಗಳ ಉಳುವಿಗೆ ಕಂಕಣ ಬದ್ಧರಾಗಿ ದುಡಿಯುವಂತೆ ಅವರು ಸೂಚಿಸಿದ್ದಾರೆ.

- Advertisement - 

ಎಸ್. ಟಿ.ನವೀನ್ ಕುಮಾರ್ ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ಎಂ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳಿಗೆ ಚಂದ್ರವಳ್ಳಿ ಪತ್ರಿಕೆಯ ಸಂಪಾದಕರು ಮತ್ತು ಚಂದ್ರವಳ್ಳಿ ಪತ್ರಿಕಾ ಬಳಗವು ಅಭಿನಂದನೆ ಸಲ್ಲಿಸಿದೆ.

 

- Advertisement - 

Share This Article
error: Content is protected !!
";