ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯು ನಗರದ ಡಿ.ಕ್ರಾಸ್ ನಲ್ಲಿರುವ ಜಗಜೀವನ್ ರಾಮ್ ಭವನದಲ್ಲಿ ನಡೆಯಿತು ಸಂಘದ ರಾಜ್ಯ ಕಾರ್ಯಾದ್ಯಕ್ಷ ಜಂಬೂ ದ್ವೀಪ ಸಿದ್ದರಾಜು ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ರವರು ಬಾರತದ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ನಂತರ ದೊಡ್ಡಬಳ್ಳಾಪುರ ತಾಲ್ಲೂಕು ಆದಿಜಾಂಬವ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ-
ಗೌ.ಅಧ್ಯಕ್ಷ–ಮುನಿಯಪ್ಪ(ನಾಗಸಂದ್ರ), ಅಧ್ಯಕ್ಷ-ಕೃಷ್ಣಮೂರ್ತಿ (ದರ್ಗಾಜೋಗಿಹಳ್ಳಿ), ಕಾರ್ಯಾಧ್ಯಕ್ಷ–ಮುನಿರಾಜು (ರಾಜಘಟ್ಟ), ಉಪಾಧ್ಯಕ್ಷರಾದ-ಮುನಿಯಲ್ಲಪ್ಪ (ರಾಜಘಟ್ಟ), ನರಸಿಂಹ ಮೂರ್ತಿ (ಕೂಗಾನಹಳ್ಳಿ), ಪ್ರಧಾನ ಕಾರ್ಯದರ್ಶಿ-ಶಿವಶಂಕರಪ್ಪ ಕುಂಟನಹಳ್ಳಿ,
ಜಂಟಿ ಕಾರ್ಯದರ್ಶಿ-ಜಿ.ಮಂಜುನಾಥ (ಕರಿಂಸೊಣ್ಣೇನಹಳ್ಳಿ), ಕಾರ್ಯದರ್ಶಿ ಲಕ್ಷಮ್ಮ(ವಾಣಿಗರಹಳ್ಳಿ), ಸಹ ಕಾರ್ಯದರ್ಶಿ-ರವಿಕುಮಾರ್.ಆರ್(ಅಡಕವಾಳ),
ಸಂಘಟನಾ ಕಾರ್ಯದರ್ಶಿ ಸ ತೀಶ್ .ಕೆ (ಕಾಡತಿಪ್ಪೂರು), ಖಜಾಂಚಿ–ನೇತ್ರ (ಕುರುಬರಹಳ್ಳಿ)ಇವರುಗಳು ಆಯ್ಕೆಗೊಂಡಿದ್ದಾರೆ.
ನೂತನವಾಗಿ ಆಯ್ಕೆಗೊಂಡ ತಾಲ್ಲೂಕು ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ತಾಲೂಕಿನಲ್ಲಿ ಶೋಷಿತ ಬಡವರ್ಗದ ಅಭಿವೃದ್ಧಿಗೆ ಶ್ರಮವಹಿಸಿ ದುಡಿಯುವುದಾಗಿ ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಿವಶಂಕರಪ್ಪ ಮಾತನಾಡಿ ತಾಲೂಕಿನಲ್ಲಿ ಹಲವಾರು ಸಂಘಟನೆಗಳು ಇದ್ದು ಬಡವರ್ಗದ ಜನರಿಗೆ ನ್ಯಾಯಸಿಗುತ್ತಿಲ್ಲ ಮಾದಿಗ ಜನಾಂಗಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ನಮ್ಮ ಗುರಿಯಾಗಿದ್ದು ಸ್ವಂತ ಖರ್ಚಿನಲ್ಲಿ ಸಂಘಟನೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯರಾದ ಹನುಮಂತರಾಜು, ರಾಜ್ಯ ಮುಖಂಡರಾದ ಪುಟ್ಟರಾಜು ಎಂ, ಬಿಎಂಟಿಸಿ ಗೋವಿಂದರಾಜು, ಲಿಂಗರಾಜು, ದುರ್ಗಪ್ಪ, ಮಂಜುನಾಥ್ ಇನ್ನು ಮುಂತಾದವರು ಭಾಗವಹಿಸಿದ್ದರು.

