ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜನವರಿ-31 ರಂದು ಚುನಾವಣೆ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ, ಪ್ರದರ್ಶಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎನ್.ಕಿಶೋರ್ ಕುಮಾರ್, ಪ್ರದರ್ಶಕ ವಲಯದ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಸಿ ಅಶೋಕ್ ಹಾಗೂ ಪ್ರದರ್ಶಕ ವಲಯದ ಕಾರ್ಯಕಾರಿ ಸಮಿತಿಗೆ ಜಿ.ಪಿ ಕುಮಾರ್, ಎಸ್.ಎನ್ ಚಂದ್ರಶೇಖರ್, ರಾಜು, ಲಿಂಗರಾಜು ಕೆ ಅವರು ಸ್ಪರ್ಧಿಸಿದ್ದಾರೆ.
ಈ ತಂಡಕ್ಕೆ ಅಮೂಲ್ಯವಾದ ಮತ ನೀಡಿ ಆಯ್ಕೆ ಮಾಡುವಂತೆ ಪ್ರದರ್ಶಕ ವಲಯದ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿರುವ ಜಿ.ಪಿ ಕುಮಾರ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

