ಜಿಕೆವಿಕೆಯಲ್ಲಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ ಮತ್ತು ಕೃಷಿ ಸಂವಾದ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ರೈತ ಉತ್ಪಾದಕ ಸಂಸ್ಥೆಗಳ ಉತ್ಕøಷ್ಟ ಕೇಂದ್ರ ಹಾಗೂ ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ ಮತ್ತು ಮೂನ್‍ರೈಡರ್ ಸಹಯೋಗದೊಂದಿಗೆ 2025ನೇ ಡಿಸೆಂಬರ್ 04 ರಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರಗೆ ಬೆಂಗಳೂರಿನ ಜಿ.ಕೆ.ವಿಕೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಆವರಣದಲ್ಲಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ ಮತ್ತು ಕೃಷಿ ಸಂವಾದಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಭಾರತ ದೇಶದಲ್ಲಿ ಸುಸ್ಥಿರ ಕೃಷಿ ಯಾಂತ್ರೀಕರಣಕ್ಕೆ ದಾರಿ ಮಾಡಿಕೊಡುವ ದೇಶದ ಮೊಟ್ಟಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮಹತ್ವದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಆರ್. ವಿಶ್ವನಾಥ್ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ವಿಷ್ಣುವರ್ಧನ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

- Advertisement - 

ಕಾರ್ಯಕ್ರಮದ ವಿಶಿಷ್ಟತೆ:
ಸುಸ್ಥಿರ ಕೃಷಿಗೆ ಉತ್ತೇಜನ : ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಹವಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಮತ್ತು ರೈತರ ಇಂಧನ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಟರ್‍ಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶವಾಗಿದೆ. ಇದು ನೇರವಾಗಿ ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ.

ನೇರ ಪ್ರಾತ್ಯಕ್ಷಿಕೆ ಮತ್ತು ಅರಿವು : ಕಾರ್ಯಕ್ರಮದಲ್ಲಿ ರಾಜ್ಯದ 100 ಪ್ರಗತಿಪರ ರೈತ ಉತ್ಪಾದಕ ಸಂಸ್ಥೆಗಳಿಂದ 300ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದು, ಎಲೆಕ್ಟ್ರಿಕ್  ಟ್ರ್ಯಾಕ್ಟರ್‍ಗಳ ನೇರ ಪ್ರಾತ್ಯಕ್ಷಿಕೆ ಹಾಗೂ ಅವುಗಳ ಕಾರ್ಯಕ್ಷಮತೆಯನ್ನು ಖುದ್ದು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.

- Advertisement - 

ದೀಘಾವಧಿಯ ಪೈಲೆಟ್ ಯೋಜನೆ :
ಕೇವಲ ಮೇಳಕ್ಕೆ ಸೀಮಿತವಾಗದೆ
, ಎಲೆಕ್ಟ್ರಿಕ್ ಟ್ರ್ಯಾಕ್ಟರ್‍ಗಳನ್ನು ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಎರಡು ತಿಂಗಳ ಕಾಲ ಪ್ರದರ್ಶನಕ್ಕ ಇಡಲಾಗಿದೆ. ಆನೇಕಲ್ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಆನೇಕಲ್‍ನಲ್ಲಿ ರೈತರೊಂದಿಗೆ ಎರಡು ತಿಂಗಳ ಪ್ರಾಯೋಗಿಕ ಪೈಲೆಟ್ ಯೋಜನೆಯನ್ನು ಪ್ರಾರಂಭಿಸಲಾಗುವುದು.

ಈ ಕಾರ್ಯಕ್ರಮದ ಮೂಲಕ ಕೃಷಿ ವಲಯದಲ್ಲಿ ನಡೆಯುತ್ತಿರುವ ಸುಧಾರಣಗಳು, ವಿಶೇಷವಾಗಿ ಸುಸ್ಥಿರ ತಂತ್ರಜ್ಞಾನಗಳ ಅಳವಡಿಕೆಯ ಕುರಿತು ರೈತ ಸಮುದಾಯ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ.

 

Share This Article
error: Content is protected !!
";