ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಭಾರತದಂತಹ ಜನಸಂಖ್ಯೆ ಹೆಚ್ಚಾಗಿರುವ ದೇಶಗಳಲ್ಲಿ ಇಂಧನ ಭದ್ರತೆ, ವಾಯುಮಾಲಿನ್ಯ, ಆರ್ಥಿಕ ಸಮಸ್ಯೆ ನಿವಾರಣೆ ಮತ್ತು ಜಾಗತಿಕ ತಾಪಮಾನದಂತಹ ಸಮಸ್ಯೆಗಳನ್ನು ನಿವಾರಿಸಿ, ಸುಸ್ಥಿರ ಅಭಿವೃದ್ಧಿಯತ್ತ ಮುನ್ನಡೆಯಲು ಎಲೆಕ್ಟ್ರಕ್ ವಾಹನಗಳು ಪ್ರಮುಖ ಪರಿಹಾರ ಮಾರ್ಗಗಳಾಗಿವೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ರಮೇಶ್ ಸಾಲಿಯಾನ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ಎಂಬಿಎ ವಿಭಾಗದ ವತಿಯಿಂದ ಐಸಿಎಸ್‌ಎಸ್‌ಆರ್ ಪ್ರಾಯೋಜಕತ್ವದಲ್ಲಿ ಗುರುವಾರ ಏರ್ಪಡಿಸಿದ್ದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು: ಸುಸ್ಥಿರತೆಯತ್ತ ಚಾಲನೆ ಕುರಿತ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಲಾಭವನ್ನು ಮಾತ್ರ ಪರಿಗಣಿಸದೆ ಸುಸ್ಥಿರ ಆರೋಗ್ಯವನ್ನೂ ಪರಿಗಣಿಸುವುದು ಮುಖ್ಯ. ದೇಶದಲ್ಲಿ ವಾಯುಮಾಲಿನ್ಯ ಗಂಭೀರ ಸಮಸ್ಯೆಯಾಗಿದ್ದು, ಪೆಟ್ರೋಲ್, ಡೀಸೆಲ್ ವಾಹನಗಳಿಂದ ಹೊರಸೂಸುವ ಹಾನಿಕಾರಕ ಅನಿಲಗಳು ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಎಲೆಕ್ಟಿçಕ್ ವಾಹನಗಳ ಬಳಕೆಯಿಂದ ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹೇಳಿದರು.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಇಂಧನಕ್ಕಾಗಿ ಸಂಘರ್ಷ ನಡೆಯುತ್ತಿದೆ. ಭಾರತವು ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ವಿದೇಶಿ ರಾಷ್ಟçಗಳನ್ನು ಅವಲಂಬಿಸಿದೆ. ಈ ಆರ್ಥಿಕತೆಯ ಒತ್ತಡವನ್ನು ನಿವಾರಿಸಿ, ದೇಶೀಯವಾಗಿ ಉತ್ಪಾದಿತ ವಿದ್ಯುತ್ ಶಕ್ತಿ ಬಳಕೆ ಮಾಡಿಕೊಂಡರೆ ಆಮದು ವೆಚ್ಚ ಕಡಿಮೆಯಾಗುವುದು. ದೇಶದ ಆರ್ಥಿಕತೆ (ಜಿಡಿಪಿ) ಬಲಗೊಳ್ಳುವುದು ಎಂದು ನುಡಿದರು.
ಎಲೆಕ್ಟಿçಕ್ ವಾಹನಗಳ ಕಡೆಗೆ ಸಾಗುವ ಪ್ರಯಾಣವು ದೊಡ್ಡ ಸವಾಲು ಮತ್ತು ಜವಾಬ್ದಾರಿಯಾಗಿದೆ. ಎಲ್ಲರೂ ಒಟ್ಟಾಗಿ ಈ ಪರಿವರ್ತನೆಯಲ್ಲಿ ಭಾಗವಹಿಸಬೇಕಾಗಿದೆ. ಸ್ವಾವಲಂಬಿ, ಸುಭದ್ರ ಆರ್ಥಿಕತೆಯ ಭಾರತ ನಿರ್ಮಾಣಕ್ಕೆ ಹೆಜ್ಜೆ ಇಡಲು ಪರ್ಯಾಯಗಳ ಚಿಂತನೆ ಅನಿವಾರ್ಯ ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಭಾರತದ ಸುಸ್ಥಿರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯ, ಮೇಡ್ ಇನ್ ಇಂಡಿಯದAತಹ ಯೋಜನೆಗಳ ಮೂಲಕ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದರು.
ಭವಿಷ್ಯದ ಭಾರತದಲ್ಲಿ ಎಲೆಕ್ಟಿçಕ್ ವಾಹನಗಳ ಪಾತ್ರವು ಅನಿವಾರ್ಯ ಮತ್ತು ನಿರ್ಣಾಯಕವಾಗಿದೆ. ಎಲೆಕ್ಟಿçಕ್ ವಾಹನಗಳ ಬಿಡಿಭಾಗಗಳ ಉತ್ಪಾದನೆಗೆ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಚಿಂತನೆ ಮಾಡಿ, ಉದ್ಯಮಶೀಲರಾಗಬೇಕು ಎಂದು ಸಲಹೆ ನೀಡಿದರು.
ದೇಶದಾದ್ಯಂತ ಚಾರ್ಜಿಂಗ್ ಸ್ಟೇಷನ್‌ಗಳ ಜಾಲ ಇನ್ನೂ ಸಮರ್ಪಕವಾಗಿ ಅಭಿವೃದ್ದಿಯಾಗಿಲ್ಲ. ಹೆದ್ದಾರಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಸಿದ್ಧಗೊಂಡರೆ, ಎಲೆಕ್ಟಿçಕ್ ವಾಹನಗಳ ವಹಿವಾಟಿಗೆ ಹೆಚ್ಚಿನ ಬೇಡಿಕೆ ಬರಲಿದೆ ಎಂದರು.
ದಾವಣಗೆರೆಯ ಮಹಾಂತ ಮೋರ‍್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಮಾತನಾಡಿ, ಎಲೆಕ್ಟಿçಕ್ ವಾಹನಗಳ ನಿರ್ವಹಣಾ ವೆಚ್ಚವು ಸಾಂಪ್ರದಾಯಿಕ ವಾಹನಗಳಿಗಿಂತ ಕಡಿಮೆಯಾಗಿದೆ. ಅಲ್ಲದೆ ವಿದ್ಯುತ್ ಇಂಧನದ ಬೆಲೆ ಇತರ ಇಂಧನಗಳಿಗಿಂತ ತೀರ ಅಗ್ಗವಾಗಿದ್ದು, ಗ್ರಾಹಕರಿಗೆ ಆರ್ಥಿಕವಾಗಿ ಲಾಭದಾಯಿಕವಾಗಿದೆ ಎಂದು ಹೇಳಿದರು.
ಎಲೆಕ್ಟಿçಕ್ ವಾಹನಗಳ ಆರಂಭಿಕ ಹೂಡಿಕೆ ವೆಚ್ಚ ಇತರ ಸಾಂಪ್ರದಾಯಿಕ ವಾಹನಗಳಿಗಿಂತ ಹೆಚ್ಚಾಗಿದೆ. ಸುಧಾರಿತ ಬ್ಯಾಟರಿ ತಂತ್ರಜ್ಞಾನದೊAದಿಗೆ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಬ್ಯಾಟರಿ ತಯಾರಿಕೆಗೆ ಬೇಕಾದ ಲಿಥಿಯಂ, ಕೋಬಾಲ್ಟ್, ನಿಕೆಲ್‌ನಂತಹ ಖನಿಜಗಳ ಲಭ್ಯತೆ ಭಾರತದಲ್ಲಿ ಸೀಮಿತವಾಗಿದ್ದು, ವಿದೇಶಗಳನ್ನೇ ಅವಲಂಬಿಸಬೇಕಾಗಿದೆ. ಅಲ್ಲದೆ ಬ್ಯಾಟರಿಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಮತ್ತು ಮರುಬಳಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸಿಗ್ನೆಟ್ ಎಂಟರ್‌ಪ್ರೆಸಸ್ ಸಿಇಒ ಬಿ.ವಿ.ವೆಂಕಟಶ್ಯಾಮ್ ಮಾತನಾಡಿ, ತಂತ್ರಜ್ಞಾನ ಸುಧಾರಣೆ, ಬ್ಯಾಟರಿ ವೆಚ್ಚದಲ್ಲಿ ಇಳಿಕೆ ಮತ್ತು ಸಮರ್ಪಕ ನೀತಿಗಳ ಮೂಲಕ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆ ಇದೆ. ಇದು ಸ್ವಚ್ಛ, ಹಸಿರು ಮತ್ತು ಅರ್ಥಿಕವಾಗಿ ಸದೃಢವಾದ ಭಾರತ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಎAಬಿಎ ವಿಭಾಗದ ಮುಖ್ಯಸ್ಥ ಮತ್ತು ಡೀನ್ ಪ್ರೊ.ಆರ್.ಶಶಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಕೆ.ರಾಜು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಹಸಂಚಾಲಕಿ ಡಾ.ಸುನೀತಾ ಸ್ವಾಗತಿಸಿದರು. ಡಾ. ರಮೇಶ್‌ಚಂದ್ರಹಾಸ್ ವಂದಿಸಿದರು. ಡಾ.ಆಸೀಫುಲ್ಲಾ ಕಾರ್ಯಕ್ರಮ ನಿರೂಪಿಸಿದರು.

