ಮತಾಂಧರು, ಮುಸ್ಲಿಂ ಮೂಲಭೂತವಾದಿಗಳ ತುಷ್ಟೀಕರಣಕ್ಕಾಗಿ ವಕ್ಫ್‌ ಬೋರ್ಡ್‌ಗೆ ಆನೆ ಬಲ

News Desk

ಚಂದ್ರವಳ್ಳಿ ನ್ಯೂಸ್ ಬೆಂಗಳೂರು ದೇಶದಲ್ಲಿ ಸಂಚಲನ ಮೂಡಿಸಿದ್ದ ವಕ್ಫ್‌ ಮಂಡಳಿಯ ಲ್ಯಾಂಡ್‌ ಜಿಹಾದಿಗೆ ಕಡಿವಾಣ ಹಾಕುವ ಸಲುವಾಗಿ ಮೋದಿ ಸರ್ಕಾರ ರಚಿಸಿದ್ದ ವಕ್ಫ್‌ ತಿದ್ದುಪಡಿಯ ಜೆಪಿಸಿ ವರದಿಗೆ ಕಾಂಗ್ರೆಸ್ ಸಹಿತ ಇಂಡಿ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಈ ಮೂಲಕ ವಕ್ಫ್‌ ಮಂಡಳಿಯ ಭೂ ದಾಹಕ್ಕೆ ಕಾಂಗ್ರೆಸ್‌ ಕೂಡಾ ಕೈ ಜೋಡಿಸಿದೆ ಎಂದು ಬಿಜೆಪಿ ತಿಳಿಸಿದೆ.

ರೈತರು, ದಲಿತರು, ಮಠ ಮಂದಿರ ಎಂದು ನೋಡದಂತೆ ಭೂ ಭಸ್ಮಾಸುರನಂತೆ ಕಂಡಕಂಡ ಭೂಮಿಯನ್ನು ವಕ್ಫ್‌ ಮಂಡಳಿ ವಶಕ್ಕೆ ಪಡೆಯುತ್ತಿರುವುದನ್ನು ಕಾಂಗ್ರೆಸ್‌ ಪಕ್ಷ ತನ್ನ ಮತಬ್ಯಾಂಕ್‌ ಕೈ ತಪ್ಪುವ ಭಯದಿಂದ ವಿರೋಧಿಸುತ್ತಿಲ್ಲ ಎಂದು ತಿಳಿಸಿದರು

ರಾಜ್ಯದಲ್ಲಂತೂ ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರ ಭೂಮಿಯನ್ನು ವಕ್ಫ್‌ ಮಂಡಳಿ ವಶಕ್ಕೆ ಪಡೆದುಕೊಂಡಿತ್ತು. ಇದರ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಜಮೀರ್ ಅವರ ಕೈವಾಡ ಮತ್ತು ಸಿಎಂ ಸಿದ್ದರಾಮಯ್ಯ ಅವರ ಸಹಕಾರವಿತ್ತು. ಜನರಿಗೆ ವಕ್ಫ್‌ ಮಂಡಳಿಯಿಂದ ಅನ್ಯಾಯ ಆಗುತ್ತಿದ್ದರೂ ಕಾಂಗ್ರೆಸ್‌ ಮಾತ್ರ ಮೌನವಾಗಿತ್ತು ಎಂದು ತಿಳಿಸಿದರು.

ಇದೀಗ ಜೆಪಿಸಿ ವರದಿಗೂ ಕಾಂಗ್ರೆಸ್‌ ಪಕ್ಷ ವಿರೋಧ ವ್ಯಕ್ತಪಡಿಸುವ ಮೂಲಕ ತಾನು ಹಿಂದೂ ವಿರೋಧಿ ಎಂಬುದನ್ನು ಮತ್ತೆ ಸ್ಪಷ್ಟಪಡಿಸಿದೆ.

ಬಡವರು, ರೈತರು, ದಲಿತರು, ಮಠ, ಮಂದಿರಗಳ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿದ್ದ ವಕ್ಫ್‌ ಬೋರ್ಡ್‌ಗೆ ಲಂಗು ಲಗಾಮು ಹಾಕಲು ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುತ್ತಿದೆ. ಇದರ ಭಾಗವಾಗಿ ಸಂಸತ್‌ನ ಜಂಟಿ ಸಂಸದೀಯ ಸಮಿತಿ ಸಿದ್ಧಪಡಿಸಿದ ವರದಿಯನ್ನು ಉಭಯ ಸದನಗಳಲ್ಲೂ ಮಂಡಿಸಲಾಗಿದೆ.

ಮತಾಂಧರು, ಮುಸ್ಲಿಂ ಮೂಲಭೂತವಾದಿಗಳ ತುಷ್ಟೀಕರಣಕ್ಕಾಗಿ ವಕ್ಫ್‌ ಬೋರ್ಡ್‌ಗೆ ಆನೆ ಬಲ ನೀಡಿದ್ದ ಕಾಂಗ್ರೆಸ್ ವಕ್ಫ್‌ಗೆ ಕಡಿವಾಣ ಹಾಕುವುದಕ್ಕೂ ಕ್ಯಾತೆ ತೆಗೆದು ಸದನದಿಂದ ಹೊರ ನಡೆದಿದೆ.

ರಾಜ್ಯಸಭೆಯಲ್ಲಿ ಟಿಪ್ಪಣಿ ಒಳಗೊಂಡ ವರದಿ ಮಂಡನೆಯಾಗಿದೆ. ಸಮಿತಿ ಅಧ್ಯಕ್ಷರಿಗೆ ಟಿಪ್ಪಣಿ ತೆಗೆದು ಹಾಕುವ ಅಧಿಕಾರ ಇರುತ್ತದೆ. ಇದನ್ನೇ ನೆಪ ಮಾಡಿಕೊಂಡು ವಿಪಕ್ಷಗಳು ಸದನ ಬಹಿಷ್ಕರಿಸುವ ಮೂಲಕ ಮುಸ್ಲಿಮರನ್ನು ಓಲೈಸುವ ಪ್ರಯತ್ನ ಮಾಡಿವೆ ಎಂದು ತಿಳಿಸಿದರು.

Share This Article
error: Content is protected !!
";