ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೆಕ್ಕದಾಟ ಹನ್ನೊಂದು
………………………..
ಎರಡು ತಂಡಗಳು
ಮೈದಾನದಲ್ಲೇ
ಬ್ಯಾಟು ಬಾಲಾಟ
ಜೂಜಿಗೆ ದುಂಬಾಲು
ಆಟವಾಡಿದವರು
ಚಟ್ಟವೇರಿದವರು
ವಾಸ್ತವದಲ್ಲಿ
ಆಡಿಸಿದವನೇ ಬಲ್ಲ
ಒಟ್ಟೊಟ್ಟಿಗೆ
ಸಮ ಸಮ ಸನ್ಮಾನ
ಜೀವ ಬೆಲೆಯ ಲಕ್ಷಗಳು
ಗೆದ್ದವರು ಬಿದ್ದವರೊಟ್ಟಿಗೆ
ಕುಣಿದಾಟ
ದೇಶ ಗೆದ್ದ ಸಂಭ್ರಮವಲ್ಲ
ಅನ್ನದಾತ ಶ್ರಮಿಕ ಜ್ಞಾನಿ
ಯೋಧನ ಸನ್ಮಾನವಲ್ಲ
ಅರಿವು ಮರೆಯಾಯಿತೆ
ನಾಡ ದೊರೆಯೇ
ತಳ ರೋಧನ ಸುಶ್ರಾವ್ಯವೇ
ಯಾಕೀ ರಾಕ್ಷಸ ನರ್ತನ
ಸೂತಕ ಟ್ರೋಪಿ
ಯಾರಿಗೆ ಬೇಕಿತ್ತು
ಸಾವ ಬೆನ್ನೇರಿದ
ಕನಸ ಕಥೆಗಳು
ಚೂರು ಚೂರೋ
ಸಾಕಾರವೋ
ಸೋಲೊ ಗೆಲುವೋ
ಎಲ್ಲವೂ ಸರಿಯಿದೆಯಾ
ನಿನ್ನ ಕಾರ್ಯವೈಕರಿ
ಸ್ವಾಗತವೋ
ಅಶ್ರುತರ್ಪಣವೋ
ವಿಧಿಯಾಟದಲ್ಲಿ
ಹನ್ನೊಂದರ
ಆಟದ ಲೆಕ್ಕವೇ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.