ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಸಂಖ್ಯೆ ಪಿ ಎಸ್ ಸಿ 516, ಇ (1)/(ಹೆಚ್.ಕೆ)/2023-24 ದಿನಾಂಕ 01-03-2024ರಂದು ಅಧಿಸೂಚಿಸಲಾದ
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಹೈದ್ರಾಬಾದ್–ಕರ್ನಾಟಕ ವೃಂದದ–15 ಗ್ರೂಪ್–‘ಎ‘ ಸಹಾಯಕ ನಿಯಂತ್ರಕರ ಹುದ್ದೆಗಳ ನೇಮಕಾತಿಗೆ ದಿನಾಂಕ:28-07-2024ರಂದು ನಡೆಸಲಾದ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:20 ಅನುಪಾತದಲ್ಲಿ
ಅರ್ಹತೆ ಪಡೆದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ದಿನಾಂಕ:20-09-2024ರಂದು ಆಯೋಗದ ವೆಬ್ಸೈಟ್ http://kpsc.kar.nic.in/list/eligibility ನಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕದ ಕುರಿತು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.