ಗಬ್ಬೆದ್ದ ಆರೋಗ್ಯ ಇಲಾಖೆ, ಮೌನಕ್ಕೆ ಸರಿದ ಸಚಿವರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಆರೋಗ್ಯ ಇಲಾಖೆಯನ್ನು ನಿರ್ವಹಿಸುತ್ತಿರುವ ದಿನೇಶ್ ಗುಂಡೂರಾವ್
ಅವರು ತಮ್ಮ ಇಲಾಖೆಯನ್ನೂ ಅಯೋಮಯ ಮಾಡಿದ್ದಾರೆ, ತಮ್ಮ ಕ್ಷೇತ್ರವನ್ನೂ ಗಬ್ಬೆಬ್ಬಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

- Advertisement - 

ಆರೋಗ್ಯ ಸಚಿವರ ಕ್ಷೇತ್ರದಲ್ಲಿ ನೈರ್ಮಲ್ಯ, ಶುಚಿತ್ವ ಎನ್ನುವ ಪದಗಳಿಗೆ ಜಾಗವೇ ಇಲ್ಲದಂತಾಗಿದೆ. ತಮ್ಮ ಕ್ಷೇತ್ರವನ್ನೇ ರೋಗರುಜಿನಗಳ ತಾಣವಾಗಿಸಿದವರು ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ಎಷ್ಟು ಗಮನವಹಿಸುವರು? ಎಂದು ಬಿಜೆಪಿ ಪ್ರಶ್ನಿಸಿದೆ.

- Advertisement - 

ಜನಸಾಮಾನ್ಯರು ನಡೆದಾಡುವ ಸಾರ್ವಜನಿಕ ಸ್ಥಳಗಳನ್ನು ಕಾಂಗ್ರೆಸ್‌ಸರ್ಕಾರ ಕಸದ ಕೊಂಪೆಯಾಗಿಸುತ್ತಿದೆ. ಬ್ರ್ಯಾಂಡ್‌ಬೆಂಗಳೂರು ಎನ್ನುವುದು ಜಾಹೀರಾತಿಗೆ ಮಾತ್ರ ಸೀಮಿತವಾಗಿದೆ, ಬೆಂಗಳೂರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ರೌರವ ನರಕ ಮಾಡಲು ಹೊರಟಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

 

- Advertisement - 

Share This Article
error: Content is protected !!
";