ಹದಿಹರೆಯದವರ ಧನಾತ್ಮಕ ಮನೋವಿಕಾಸಕ್ಕೆ ಒತ್ತು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹದಿಹರೆಯದ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಧನಾತ್ಮಕ ಆಲೋಚನೆಗಳನ್ನು ರೂಢಿಸುವ ಮೂಲಕ ಸಶಕ್ತ ವ್ಯಕ್ತಿತ್ವಗಳ ನಿರ್ಮಾಣ ಇಂದಿನ ಅಗತ್ಯವಾಗಿದ್ದು
, ಅದಕ್ಕೆ ಲಯನ್ಸ್‌ ಕ್ವೆಸ್ಟ್‌ ಪರಿಕಲ್ಪನೆ ಪೂರಕವಾಗಿದೆ ಎಂದು ಮಲ್ಟಿಪಲ್‌ ಕ್ವೆಸ್ಟ್‌ ಮುಖ್ಯಸ್ಥ ಡಾ.ಎಸ್.ನಾಗರಾಜ್‌ ರಾವ್‌ ಅಭಿಪ್ರಾಯಪಟ್ಟರು.

ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನಿಂದ ಲಯನ್ಸ್‌ ಜಿಲ್ಲೆ 317ಎಫ್‌ ಕ್ವೆಸ್ಟ್‌ ಅನುಷ್ಠಾನ ವಿಭಾಗದಿಂದ ಆಯೋಜಿಸಲಾಗಿದ್ದ 2 ದಿನಗಳ ಶಿಕ್ಷಕರ ತರಬೇತಿ ಕಾರ್ಯಾಗಾರಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

- Advertisement - 

ಕಳೆದ ಸತತ 4 ವರ್ಷಗಳಿಂದ ಜಾಲಪ್ಪ ಲಯನ್ಸ್ ಸಂಸ್ಥೆ ಈ ಶೈಕ್ಷಣಿಕ ಪರಿಕಲ್ಪನೆಯನ್ನು ತಾಲೂಕಿನ ಹತ್ತಾರು ಶಾಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ 2 ತರಬೇತಿ ಕಾರ್ಯಾಗಾರಗಳನ್ನು ಏಕಕಾಲದಲ್ಲಿ ಆಯೋಜಿಸುವ ಮೂಲಕ ಗಮನ ಸೆಳೆದಿದೆ. ಸುಮಾರು 60 ಶಿಕ್ಷಕರು ವಿವಿಧ ಕೌಶಲಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದು, ಶಾಲೆಗಳಲ್ಲಿ ಹೊಸ ಸ್ಪೂರ್ತಿಯೊಂದಿಗೆ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಸೆ ನೀಡಿರುವುದು ಶ್ಲಾಘನೀಯ ಎಂದರು.

- Advertisement - 

ತರಬೇತುದಾರರಾಗಿ ಆಗಮಿಸಿದ್ದ ಕಲ್ಪನಾ ಮೋಹನ್‌ ಮತ್ತು ಪ್ರೊ.ಪಿ.ವರ್ಗಿಸ್ ವೈದ್ಯನ್‌ ಮಾತನಾಡಿ, ಹೊಸಪೀಳಿಗೆಯ ಆಲೋಚನೆಗಳನ್ನು ಪ್ರಭಾವಿಸುವ ನಿಟ್ಟಿನಲ್ಲಿ ಉತ್ಸಾಹಿ ಶಿಕ್ಷಕ ಬಳಗ ಗಣನೀಯವಾಗಿ ತೊಡಗಿಕೊಳ್ಳುವ ಚಿಂತನೆಯಲ್ಲಿರುವುದು ಅಭಿನಂದನೀಯ ಎಂದು ತಿಳಿಸಿದರು.

ಲಯನ್ಸ್‌ ಜಿಲ್ಲೆ 317ಎಫ್‌ನ ನಿಕಟಪೂರ್ವ ಗೌರ್ನರ್‌ ಸಿ.ಎಂ.ನಾರಾಯಣಸ್ವಾಮಿ, ಜಿಲ್ಲಾ ಕ್ವೆಸ್ಟ್‌ ಮೆಂಟರ್‌ ಸಿ.ಕೆ.ಕೃಷ್ಣಮೂರ್ತಿ, ಮಲ್ಟಿಪಲ್‌ ಕ್ವೆಸ್ಟ್‌ ಸಂಯೋಜಕಿ ಜ್ಯೋತಿ ರಾಮನ್, ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಕ್ಲಬ್‌ ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್,

ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಕ್ವೆಸ್ಟ್‌ ಸಂಯೋಜಕ ಜಿಯಾವುಲ್ಲಾಖಾನ್, ಪ್ರೇಮಾ ಸೇರಿದಂತೆ ಲಯನ್ಸ್‌ ಮತ್ತು ಲಿಯೋ ಸದಸ್ಯರು ಪಾಲ್ಗೊಂಡರು.
ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

 

 

 

Share This Article
error: Content is protected !!
";