ಉದ್ಯೋಗ ಖಾತ್ರಿ ಸದ್ಬಳಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯೋಗ ಖಾತ್ರಿ ಯೋಜನೆ ಇದು ಗ್ರಾಮೀಣ ಪ್ರಾಂತ್ಯದ ಕಾರ್ಮಿಕರ ಬದುಕಿನ ಆತ್ಮಬಲದ ಯೋಜನೆ. ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ಪ್ರಾರಂಭವಾದ ಈ ಯೋಜನೆ ಗ್ರಾಮೀಣ ಪ್ರಾಂತ್ಯದ ಅಭಿವೃದ್ಧಿಗೆ ಪೂರಕವಾಗಿ ಕೂಲಿ ಕಾರ್ಮಿಕರ ಬದುಕಿಗೆ ಬೆಂಬಲವಾಗಿ ನಿಂತಿದೆ.

ಗ್ರಾಮೀಣ ಪ್ರಾಂತ್ಯದ ಕಾರ್ಮಿಕರಿಗೆ ವರ್ಷದಲ್ಲಿ 90 ದಿನ ಕೆಲಸ ಕೊಟ್ಟು ಅವರ ಬದುಕಿಗೆ ಆಸರೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ಡಾ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಸದ್ಬಳಕೆಯಿಂದ ಗ್ರಾಮೀಣ ಪ್ರಾಂತ್ಯಗಳು ಅಭಿವೃದ್ಧಿ ಹೊಂದಿವೆ ಹಾಗೂ ಜನರ ಬದುಕಿಗೆ ಆಸರೆಯಾಗಿರುವ ವಿಚಾರ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.

 ಹಳೆ ಮೈಸೂರು ಪ್ರಾಂತ್ಯದ 9 ಜಿಲ್ಲೆಯ ಪೈಕಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ನರೇಗಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ವಿಚಾರವನ್ನು ಸದ್ಬಳಕೆ ಮಾಡಿಕೊಂಡ ಪಂಚಾಯಿತಿ ಆಡಳಿತ ಮಂಡಳಿಗೆ ಕಾಂಗ್ರೆಸ್ ಮುಖಂಡ ರಘು ಗೌಡ ಅಭಿನಂದನೆ ತಿಳಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";