ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ ಶೂನ್ಯ ಎಂಬುದಕ್ಕೆ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಸಮಾವೇಶದಲ್ಲಿ ಕಂಡ ಖಾಲಿ ಕುರ್ಚಿಗಳೆ ಸಾಕ್ಷಿ ಎಂದು ಜೆಡಿಎಸ್ ಆರೋಪಿಸಿದೆ.
“ಸಾಕಪ್ಪ ಸಾಕು, ಕಾಂಗ್ರೆಸ್ ಸರ್ಕಾರ” ಅಂತ ಜನರು ಕಾಂಗ್ರೆಸ್ ಸಮಾವೇಶಕ್ಕೆ ಬಾರದೇ ದೂರ ಉಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜೆಡಿಎಸ್ ದೂರಿದೆ.
ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗಲೂ ಜನರೇ ಇರಲಿಲ್ಲ. ಜನರೇ ಇಲ್ಲದೆ ಸಮಾವೇಶದಲ್ಲಿ ಖಾಲಿಕುರ್ಚಿಗಳಿಗೆ ಸಿದ್ದರಾಮಯ್ಯ ಖಾಲಿ ಭಾಷಣ ಮಾಡುವಂತಾಗಿದ್ದು ದುರಂತ.
ಇದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಆಡಳಿತ, ಬೆಲೆ ಏರಿಕೆಗೆ ಜನಸಾಮಾನ್ಯರು ಬೇಸತ್ತಿರುವುದನ್ನು ಸೂಚಿಸುತ್ತಿದೆ. ರಾಜ್ಯದಲ್ಲಿ ಒಂದು ಸಮುದಾಯದ ತುಷ್ಟೀಕರಣ, ಅಧಿಕಾರಕ್ಕಾಗಿ ಒಡೆದು ಆಳುತ್ತಾ, ಮತಕ್ಕಾಗಿ ಜಾತಿ ಜಾತಿಗಳ ನಡುವೆ ಜಾತಿಕಿಚ್ಚು ಹಚ್ಚಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಜೆಡಿಎಸ್ ತಿಳಿಸಿದೆ.