ಸೌರಶಕ್ತಿ ಆಧಾರಿತ ಕೃಷಿ ಪಂಪ್‍ಸೆಟ್ ಬಳಕೆಯಿಂದ ಇಂಧನ ಉಳಿತಾಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೌರಶಕ್ತಿ ಆಧಾರಿತ ಕೃಷಿ ಪಂಪ್‍ಸೆಟ್‍ಗಳ ಬಳಸುವುದರಿಂದ ಇಂಧನ ಉಳಿತಾಯವಾಗುತ್ತದೆ. ರೈತರು ಕೃಷಿ ಹಾಗೂ ಗೃಹ ಬಳಕೆಗೆ ಬಿ.ಇ.ಇ ಸ್ಟಾರ್ ಲೇಬಲ್‍ವುಳ್ಳ ಪಂಪ್‍ಸೆಟ್ ಬಳಸಬೇಕು. ಇವು ಹೆಚ್ಚಿನ ಇಂಧನ ದಕ್ಷತೆ ಹೊಂದಿದ್ದು ವಿದ್ಯುತ್ ಉಳಿತಾಯಕ್ಕೆ ಸಹಕಾರಿಯಾಗಿವೆ ಎಂದು ಬಬ್ಬೂರು ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಭಾರ್ಕೆರ್ ಹೇಳಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬ್ಯರೋ ಅಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಇವರ ಸಹಯೋಗದೊಂದಿಗೆ ಶುಕ್ರವಾರ ಹಿರಿಯೂರು ತಾಲ್ಲೂಕು ಬಬ್ಬೂರಿನ ಫಾರಂನಲ್ಲಿ ಕೃಷಿ ಪಂಪ್‍ಸೆಟ್‍ಗಳು ಹಾಗೂ ಜಲ ಸಂರಕ್ಷಣೆ ಕುರಿತು ಹಮ್ಮಿಕೊಳ್ಳಲಾದ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ಕೃಷಿ ಕ್ಷೇತ್ರದಲ್ಲಿ ಬಿ.ಇ.ಇ ಸ್ಟಾರ್ ರೇಟೆನ ಉಳ್ಳ ಪಂಪುಗಳನ್ನು ಬಳಸುವುದರಿಂದ ಅಂದಾಜು ಶೇ.30 ರಷ್ಟು ವಿದ್ಯುತ್ ಉಳಿತಾಯ ಸಾಧ್ಯವಿದೆ. ಸರಿಯಾದ ಪಂಪಿಂಗ್ ಸಿಸ್ಟಮ್ ಘಟಕಗಳನ್ನು ಆಯ್ಕೆ ಮಾಡುವ ಮೂಲಕ ವಿದ್ಯುತ್ ನಷ್ಟಗಳನ್ನು ಕಡಿಮೆ ಮಾಡಬಹುದು. ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು.

ಏಕೆಂದರೆ, ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ಆದುದರಿಂದ ನೀರನ್ನು ಮಿತವಾಗಿ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಬಳಸಿದರೆ ವಿದ್ಯುತ್ತಿನ ಉಳಿತಾಯ ಸಾಧ್ಯ. ಅಗತ್ಯ ಇಲ್ಲದಿರುವ ಸಮಯದಲ್ಲಿ ಕೃಷಿ ಪಂಪ್ ಸೆಟ್‍ಗಳನ್ನು ಹಾಗೂ ಇತರೆ ವಿದ್ಯುತ್ ಪರಿಕರಗಳನ್ನು ಬಂದು ಮಾಡಬೇಕು. ಪಂಪ್ ಸೆಟ್‍ಗಳಿಗೆ  ಉತ್ತಮ ಗುಣಮಟ್ಟದ ವಿದ್ಯುತ್ ಕೇಬಲ್‍ಗಳನ್ನು ಅಳವಡಿಸುವುದರಿಂದ ಅವಘಡಗಳನ್ನು ತಡೆಯಬಹುದು. ಕಾಲಕಾಲಕ್ಕೆ ಪಂಪ್ ಸೆಟ್ ನಿರ್ವಹಣೆ ಮಾಡಬೇಕು ಎಂದರು.

- Advertisement - 

ಸೆಲ್ಕೋ ಸಂಸ್ಥೆ ಚಿತ್ರದುರ್ಗ ಜಿಲ್ಲೆಯ ವ್ಯವಸ್ಥಾಪಕ ಮಂಜುನಾಥ ಭಗವಾತ್ ಮಾತನಾಡಿ ಕೃಷಿ ಪಂಪ್‍ಸೆಟ್‍ಗಳಿಗೆ ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ವಿದ್ಯುತ್ ಸಂಪರ್ಕ ನೀಡಬಹುದು. ಇದರ ಜೊತೆಗೆ ಪಿಎಂ ಸೂರ್ಯಘರ್ ಯೋಜನೆಯಡಿ ಮನೆಯಲ್ಲಿಯೂ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಮಾರುಕಟ್ಟೆಯಲ್ಲಿ ಸೌರಶಕ್ತಿಯಿಂದ ಚಾಲಿತ ಕೃಷಿ ಪಂಪ್‍ಸೆಟ್‍ಗಳು, ಹಿಟ್ಟಿನಗಿರಣಿ, ರೊಟ್ಟಿ ತಯಾರಿಸುವ ಯಂತ್ರ, ಮನೆ ಉಪಕರಣಗಳು, ಸೋಲಾರ್ ಬಿಸಿ ನೀರಿನ ಘಟಕ, ವಿವಿಧ ಕೃಷಿ ಯಂತ್ರೋಪಕರಣಗಳ ದೊರಕುತ್ತವೆ. ಇವುಗಳಿಗೆ ಸರ್ಕಾರಿದಿಂದ ರಿಯಾಯಿತ ಸೌಲಭ್ಯ ದೊರಯುವುದು. ರೈತರು ಇದರ ಸದುಉಪಯೋಗ ಪಡೆದುಕೊಳ್ಳಬೇಕು ಎಂದರು.

ಜಲ ವಿಜ್ಞಾನಿ ಹಾಗೂ ಮಳೆನೀರು ಕೋಯ್ಲುತಜ್ಞ ಡಾ. ದೇವರಾಜರೆಡ್ಡಿಎನ್.ಜೆ. ತರಬೇತಿಯಲ್ಲಿ ಹಾಜರಿದ್ದರೈತರನ್ನು ಉದ್ದೇಶಿಸಿ ಮಳೆನೀರು ಕೋಯ್ಲು, ಬೋರ್‍ವೆಲ್ ಅಂರ್ತಜಲ ಮರುಪೂರಣ, ಮಳೆ ನೀರಿನ ಬಡ್‍ಜೆಟ್, ನೀರಿನ ಮಿತಬಳಕೆ ಮತ್ತು ಜಲಸಂರಕ್ಷಣೆ ಕುರಿತು ರೈತರಿಗೆ ತರಬೇತಿ ನೀಡದರು.

ಬೇಸಾಯ ಶಾಸ್ತ್ರಜ್ಞ ಅಂಜಿನಪ್ಪ ಮಾತನಾಡಿ ಹನಿ ಮತ್ತು ತುಂತುರು ನೀರಾವರಿಯಿಂದ ನೀರಿನ ಮಿತಬಳಕೆ ಸಾಧ್ಯವಿದೆ. ಹನಿ ನೀರಾವರಿ ಉಪಕರಣಗಳ ಆಯ್ಕೆ, ವಿನ್ಯಾಸ, ಆಳವಡಿಕೆ, ಕ್ಷೇತ್ರದಲ್ಲಿ ಉದ್ಬವಿಸುವ ಸಮಸ್ಯೆಗಳಿಗೆ ಪರಿಹಾರ, ರಸಾವರಿ ಮೂಲಕ ವಿವಿಧ ಪೋಷಕಾಂಶಗಳ ನಿರ್ವಹಣೆ ಮತ್ತು ವಿವಿಧ ರೀತಿಯ ಫಿಲ್ಟರ್‍ಗಳ ಆಳವಡಿಕೆ, ಆಸಿಡ್ ಕ್ಲೀನಿಂಗ್ ಕುರಿತು ತಿಳಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ.ಆರ್ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ, ಹಿರಿಯೂರು ತಾಲ್ಲೂಕಿನ ಕೃಷಿಕ ಸಮಾಜದ ಅಧ್ಯಕ್ಷ  ಕಾಂತರಾಜ್, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿಯ ನಿರ್ದೇಶಕ ಕೆ ಜಗದೀಶಕಂದಿಕೆರೆ, ಹಿರಿಯೂರು ತಾಲ್ಲೂಕಿನ ಸಹಯಕ ಕೃಷಿ ನಿರ್ದೇಶಕ ಮಂಜುನಾಥ .ಎಮ್ ವಿ, ರೈತ ಮಹಿಳೆ ಪೂರ್ಣಿಮಾ ಬಡಿಗೇರ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Share This Article
error: Content is protected !!
";