ಡಾ.ವೀರಣ್ಣನವರ ಪುತ್ರ ಇಂಜಿನಿಯರ್ ವಿನಯ್ ಇನ್ನಿಲ್
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ವಿದ್ಯಾ ನಗರದ ನಿವಾಸಿ ಡಾ.ವೀರಣ್ಣನವರ ಪುತ್ರ ಇಂಜಿನಿಯರ್ ವಿ. ವಿನಯ್ ಅಪಘಾತದಲ್ಲಿ ನಿಧನರಾದರು.
ದಾವಣಗೆರೆ ಸಮೀಪದ ಶಾಮನೂರು ಬಳಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಂಜಿನಿಯರ್ ವಿನಯ್(58) ಚಿಕಿತ್ಸೆ ಫಲಕಾರಿ ಆಗದೆ ಗುರುವಾರ ಬೆಳಗಿನ ಜಾವ ಸಾವನ್ನಪ್ಪಿದರು.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ತೀರ್ಮಾನ ಮಾಡಬೇಕಿದೆ.