ಉದ್ದಿಮಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಕೇಂದ್ರದ ಯೋಜನೆ ಪಡೆದುಕೊಳ್ಳಿ-ಜಂಟಿ ನಿರ್ದೇಶಕ ಆನಂದ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಸಿನೆಸ್ ಡೆವೆಲಪ್‍ಮೆಂಟ್ ಸರ್ವಿಸ್ ಪ್ರೊವೈಡರ್ (ಬಿಡಿಎಸ್‍ಪಿ) ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೈಗಾರಿಕೋದ್ಯಮಿಗಳು ವ್ಯಾಪಾರದ ಪ್ರಾಥಮಿಕ ವಹಿವಾಟುಗಳನ್ನು ಸರ್ಕಾರದಿಂದ ಅವರ್ಥಕ ಮಾರಾಟದ ಸದೂಪಯೋಗ ಪಡಿಸಿಕೊಳ್ಳುವಂತೆ ಭಾಗವಹಿಸಿದ ಹಾಲಿ ಕೈಗಾರಿಕೋದ್ಯಮಿಗಳು, ಭಾವಿ ಕೈಗಾರಿಕೋದ್ಯಮಿಗಳು ಹಾಗೂ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ತಿಳಿಸಿದರು.

ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಟೆಕ್ಸಾಕ್ ವತಿಯಿಂದ ಈಚೆಗೆ ಕೇಂದ್ರ ಸರ್ಕಾರದ ಯೋಜನೆಯಾದ ಆರ್‍ಎಎಂಪಿ ಯೋಜನೆಯಡಿ ಒಂದು ದಿನದ ಬಿಸಿನೆಸ್ ಡೆವೆಲಪ್‍ಮೆಂಟ್ ಸರ್ವಿಸ್ ಪ್ರೊವೈಡರ್ (ಬಿಡಿಎಸ್‍ಪಿ) ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ಇತ್ತೀಚಿನ ದಿನಗಳಲ್ಲಿ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಕೈಗಾರಿಕೋದ್ಯಮಿಗಳು, ಇಂತಹ ಯೋಜನೆಗಳ ಸದೂಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘ ಅಧ್ಯಕ್ಷ ಜಿ.ಡಿ.ಕೆಂಚವೀರಪ್ಪ ಮಾತನಾಡಿ, ಸರ್ಕಾರದ ಆವರ್ತಕ ಘಟಕಗಳ ಹೊರಗಿನ ಮೂಲಗಳಿಂದ ಸಿಕ್ಕ ಹಣ ಎಲ್ಲಾ ಪ್ರಮಾಣದ ವ್ಯಾಪಾರೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಸಾಮಾನ್ಯವಾಗಿ ಇಂತಹ ಬೇಡಿಕೆ ಖಾತೆಯಲ್ಲಿ ಠೇವಣಿ ಮೇಲೆ ಬಡ್ಡಿ,

- Advertisement - 

ವ್ಯಾಪಾರದ ಪ್ರಾಥಮಿಕ ಚಟುವಟಿಕೆಗಳು ನಿರಂತರವಾಗಿ ಇರುತ್ತದೆ ಎಂದು ತಿಳಿಸಿ, ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಭಾಗವಹಿಸಿದ ಹಾಲಿ ಕೈಗಾರಿಕೋದ್ಯಮಿಗಳು, ಭಾವಿ ಕೈಗಾರಿಕೋದ್ಯಮಿಗಳು ಹಾಗೂ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ರಾಘವೇಂದ್ರ ಮಾತನಾಡಿಇಂತಹ ಯೋಜನೆಗಳು ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಒಂದು ರೀತಿಯ ಠೇವಣಿ ಖಾತೆಯಾಗಿದೆ ಹಾಗೂ ಲಾಭ ಗಳಿಸಲು ವಿನಿಮಯ ದರದಲ್ಲಿನ ಆವರ್ತಕ ಏರಿಳಿತಗಳ ಲಾಭವನ್ನು ಪಡೆಯಲು ಅವಕಾಶವಿದೆ.

ಇದು ಕೈಗಾರಿಕೋದ್ಯಮಿಗಳಿಗೆ ಲಾಭವನ್ನು ಗಳಿಸಲು ಸಾಮಾನ್ಯ ಮಾರ್ಗವಾಗಿದೆ ಎಂದು ಈ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ತಿಳಿಸಿದದರು.

ಕಾರ್ಯಕ್ರಮದಲ್ಲಿ ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಬಿ.ಕೆ.ಮಂಜುನಾಥ ಸ್ವಾಮಿ ಇದ್ದರು.

 

 

Share This Article
error: Content is protected !!
";