ಚಂದ್ರವಳ್ಳಿ ನ್ಯೂಸ್, ತುಮಕೂರು:
ಪರಿಸರ…ಆಸೆ…ಹಸಿವು…ಬದುಕು…
ಭೂಮಿಯ ಮೇಲೆ ಬರಿ ಮನುಷ್ಯರೇ ಇರಲು ಸಾಧ್ಯವಿಲ್ಲ !…
ಇಲ್ಲಾ… ಪ್ರಾಣಿ ಪಕ್ಷಿಗಳೇ ಇರಲು ಸಾಧ್ಯವಿಲ್ಲ …!
ಇದು ನೆನಪಿಸಿಕೊಳ್ಳುವುದು ಅಸಾಧ್ಯ…
ಪ್ರಕೃತಿಯಲ್ಲಿರುವ ಪ್ರಾಣಿ-ಪಕ್ಷಿ ಜಲಚರಗಳು ಹೀಗೆ ಎಲ್ಲ ರೀತಿಯ ಜೀವಸಂಕುಲ ಇದ್ದಾಗ ಮಾತ್ರ ಭೂಮಿಯಲ್ಲಿ ಎಲ್ಲವೂ ಚೆಂದ…
ಮನುಷ್ಯನು ಕೂಡ ಮುಖ್ಯ ಇತರೆ ಪ್ರಾಣಿ ಪಕ್ಷಿಗಳಿರಲು ಅವುಗಳು ಜೀವಿಸಲು ಮನುಷ್ಯನು ಕೂಡ ಅತ್ಯಗತ್ಯ …
ಹೀಗೆ ಒಂದನ್ನೊಂದು ಅವಲಂಬಿಸಿರುವ ಬದುಕು ಇಲ್ಲಿ
ಸ್ವಲ್ಪ ಸ್ವಚ್ಛತೆಯ ಕಡೆ ಗಮನ ನೀಡಿ ಪ್ಲಾಸ್ಟಿಕ್ ಪೇಪರ್ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಹಾಕಬೇಡಿ …
ಇದಕ್ಕೆ ಎಂದು ಪ್ರತ್ಯೇಕ ( ಸ್ಥಳ ) ಅಂದರೆ ಬಾಕ್ಸ್ ಗಳು ಇರುತ್ತವೆ ಅವುಗಳನ್ನು ಬಳಸಿಕೊಳ್ಳಿ ..
ಯಾವುದೇ ಉದ್ಯಾನವನಕ್ಕೆ ಹೋದಾಗ ನೀವು ತಿನ್ನಲು ತೆಗೆದುಕೊಂಡ ಪದಾರ್ಥಗಳಾದ ಚಾಕಲೇಟ್, ಚಿಪ್ಸ್, ನೀರಿನ ಬಾಟಲ್, ಇನ್ನಿತರೆ…
ತಿನಿಸಿನ ಕವರ್ ಗಳನ್ನು ದಯಮಾಡಿ ಅಲ್ಲಿರುವ ಕಸದ ಬಾಕ್ಸ್ ಅನ್ನು ಬಳಸಿಕೊಳ್ಳಿ …
ಇಲ್ಲವೇ ನಿಮ್ಮ ಬ್ಯಾಗ್ಗಳಲ್ಲಿ ಭದ್ರವಾಗಿ ಇಟ್ಟುಕೊಳ್ಳಿ …
ಬೇರೆಲ್ಲಾದರೂ ಕಸದ ಬಾಕ್ಸ್ ಕಂಡಲ್ಲಿ ಅದನ್ನು ಅಲ್ಲಿ ಹಾಕಬಹುದು.
ಪರಿಸರದಲ್ಲಿರುವ ಚಿಕ್ಕಪುಟ್ಟ ಜೀವಿಗಳು ಅಳಿದುಳಿದ ಚಾಕಲೇಟ್ ಕವರ್ ನಲ್ಲಿರುವ ಚಾಕಲೇಟಿನ ರುಚಿಗೆ ದಾಸವಾಗುತ್ತವೆ …
ಆದರೆ ಆ ಚಾಕ್ಲೆಟ್ ನುಣುಪಾದ ಆ ಸಿಹಿಯನ್ನು ರುಚಿಗೆ ಆಸೆಪಟ್ಟು ತಿಂದಾಗ ಅದರ ಆ ಸಿಹಿ ತಿನಿಸನ್ನು ಆ ಪುಟ್ಟ ಪುಟ್ಟ ಪ್ರಾಣಿ ಪಕ್ಷಿಗಳಿಗೆ ಸರಿ ಹೋಗದೆ… ಮುಂದೊಂದು ದಿನ ಅವುಗಳ ಆರೋಗ್ಯ ಕೆಡಬಹುದು ಕಾಲ ನಂತರ ಅದೇ ಕಾರಣದಿಂದ ಸಾವು ಕೂಡ ಬರಬಹುದು
ಇದರ ಕಡೆ ನಾವೆಲ್ಲ ಗಮನ ಕೊಡಬೇಕು
ಪ್ರಾಣಿ ಪಕ್ಷಿಗಳ ಪ್ರಾಣವನ್ನು ಉಳಿಸುವ ಕಡೆ ಸ್ವಲ್ಪವಾದರೂ ಗಮನವಿರಲಿ
ಬಳಸಿದ ಯಾವುದೇ ವಸ್ತುಗಳಾದ ಖಾಲಿ ಕವರ್, ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ …
ನಾವು ರಕ್ಷಿಸಬೇಕಾದ ಪ್ರಾಣಿ ಪಕ್ಷಿಗಳ ಜೀವಕ್ಕೆ
ತೊಂದರೆಯಾಗುವುದು ಬೇಡ ಇದರ ಬಗ್ಗೆ ಸ್ವಲ್ಪವಾದರೂ ಎಚ್ಚರವಹಿಸಿ … ನಮ್ಮ ಮನೆಯ ಮಂದಿ ಎಂದು…
ಜಾಗೃತ ಕವಿತೆ-ಸರಿತ.ಹೆಚ್ ಕಾಡುಮಲ್ಲಿಗೆ…