ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಕೊನಘಟ್ಟ ಅಂಚರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು.
ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಹವಾಮಾನ ವೈಪರೀತ್ಯ,ಕೈಗಾರಿಕರಣದಿಂದ ಶುದ್ಧ ಇಲ್ಲದಂತಾಗಿದೆ ಜನಸಾಮಾನ್ಯರು ಅನಾರೋಗ್ಯಕಿಡಾಗುತ್ತಿದ್ದಾರೆ ಆದ ಕಾರಣ ಪ್ರತಿಯೊಬ್ಬರೂ ಗಿಡ ನಾಟಿ ಮಾಡಿ ಪರಿಸರಕ್ಕೆ ಕೊಡುಗೆ ನೀಡಬೇಕೆಂದು ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಗೀತಾ,ವಲಯ ಮೇಲ್ವಿಚಾರಕರಾದ ರಘು, ಸೇವಾಪ್ರತಿನಿಧಿ ಪುಷ್ಪವತಿ,ಸಂಘದ ಸದಸ್ಯರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸಧಸ್ಯರಿಗೆ ಮತ್ತು ವಿಧ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು.