ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೂತಾನ್ ಗೋಲ್ಡನ್ ಪ್ಯಾಡಿ ಫೀಲ್ಡ್ ಹ್ಯಾಪಿ ಝೋನ್ ಪಾರೋ ಸಭಾಂಗಣ ಭೂತಾನ್ ನಲ್ಲಿ ಕಥಾಬಿಂದು ಪ್ರಕಾಶನದ ಕಥಾಬಿಂದು ಕನ್ನಡ ಕಂಪು ಸರಣಿ-7ರ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಪರಿಸರ ಪ್ರೇಮಿ ಪಿ.ವಿ.ಮಲ್ಲಿಕಾರ್ಜುನಯ್ಯ ನವರಿಗೆ ಭೂತಾನ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ರೀತಿಯ ಪ್ರಶಸ್ತಿ ಪಡೆಯುತ್ತಿರುವ ಕೋಟೆ ನಾಡಿನ ಪರಿಸರ ಪ್ರೇಮಿ ಮಲ್ಲಿಕಾರ್ಜುನಯ್ಯ ಅವರು ಪ್ರಥಮರಾಗಿದ್ದಾರೆ ಎನ್ನಲಾಗಿದೆ.