ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ನಗರದ ವಾರ್ಡ್ ನಂ:18ರ ಪೌರಾಕಾರ್ಮಿಕರಾದ ಮಂಜಮ್ಮ ರವರ ಮನೆಯಲ್ಲಿ ಸಮಾನತೆ ಭೋಜನಾ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಕುಟುಂಬದವರೊಂದಿಗೆ ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಪೌರಾಯುಕ್ತ ಎ.ವಾಸೀಂ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸಣ್ಣಪ್ಪ, ಮಮತ, ರತ್ನಮ್ಮ ಸೇರಿದಂತೆ ಮತ್ತಿತರರು ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಸಮಾನತೆ ಭೋಜನಾ ಸವಿದರು.
ಅಷ್ಟೇ ಅಲ್ಲದೆ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಹಾಗೂ ಸದರಿ ಪೌರಕಾರ್ಮಿಕರ ವಾಸವಿರುವ ಜಾಗವು ಕೋರ್ಟ್ ವ್ಯಾಜ್ಯವಿರುವ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಲಾಯಿತು ಹಾಗೂ ಪೌರಕಾರ್ಮಿಕರ ಕಾಲೋನಿಯಲ್ಲಿರುವ ಎಲ್ಲಾ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಮತ್ತು ವಸತಿ ಇಲ್ಲದವರಿಗೆ ಜಿ+2ನಲ್ಲಿ ಮನೆಗಳನ್ನು ನೀಡಲು ಹಾಗೂ ಖಾಲಿ ನಿವೇಶನ ಹೊಂದಿರುವ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ರೂ.7.5 ಲಕ್ಷಗಳನ್ನು ಪಡೆಯಲು ಅರ್ಜಿಸಲ್ಲಿಸಲು ಮತ್ತು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆಯಲು ಸೂಚಿಸಲಾಯಿತು.
ಈ ಸಂಧರ್ಭದಲ್ಲಿ ಪೌರಕಾರ್ಮಿಕರಾದ ಸಿ.ಶಿವಣ್ಣ, ಬಸವರಾಜು, ಮಂಜುನಾಥ್, ಗಂಗಮ್ಮ, ಕದುರಪ್ಪ, ಜಯಣ್ಣ, ಅಂಜಿನಮ್ಮ, ಮುಕುಂದಪ್ಪ, ತಿಪ್ಪಯ್ಯ, ವೀರೇಂದ್ರ ಹಾಗೂ ಕುಟುಂಬದವರು ನರಸಿಂಹಮೂರ್ತಿ, ಲಕ್ಷ್ಮಣ, ಕೆಂಚಪ್ಪ, ಈರಣ್ಣ, ಬಿ.ಹೆಚ್.ರವಿ, ಆರ್.ಸಿ.ಆನಂದ್, ವಸಂತ್, ನಾಗರಾಜ್, ರಮೇಶ್, ಶಿವಣ್ಣ, ನಗರಸಭೆಯ ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು ಉಪಸ್ಥಿತಿಯಲ್ಲಿದ್ದರು.

