ತುಂಗಭದ್ರಾ ಜಲಾಶಯದ 6 ಕ್ರಸ್ಟ್ ಗೇಟ್ ಗಳಲ್ಲಿ ದೋಷ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯನಗರ
, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಈ ಭಾರಿ ಉತ್ತಮ ಮಳೆಯಾಗಿದ್ದರೂ ಸಹ

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಬರುತ್ತಿದ್ದರೂ 6 ಕ್ರಸ್ಟ್ ಗೇಟ್ ಗಳಲ್ಲಿ ದೋಷ ಕಾಣುತ್ತಿದೆ. ಕಳೆದ ಆಗಸ್ಟ್ ನಲ್ಲೂ ಸಹ 19ನೇ ಟ್ರಸ್ಟ್ ಗೇಟ್ ಮುರಿದು ಹೋಗಿದ್ದ ಘಟನೆಯಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದೆ.

- Advertisement - 

ಪ್ರತಿ ವರ್ಷ ಈ ಭಾಗದ ರೈತರು ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು, ಆದರೆ ಈ ವರ್ಷ ಆ ಅನಾಹುತದ ಕಾರಣದಿಂದ ಒಂದು ಬೆಳೆಗೆ ರೈತರು ತೃಪ್ತಿ ಪಟ್ಟುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ. 

ಕ್ರಸ್ಟ್ ಗೇಟ್ ಗಳನ್ನ ತಕ್ಷಣ ಅಳವಡಿಸದ ಕಾರಣದಿಂದ ಆ ಭಾಗದ ರೈತರು ಈಗಲೂ ಆತಂಕದ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನವಲಿ ಸಮಾನಾಂತರ ಜಲಾಶಯದ ಬಗ್ಗೆ ಪ್ರಸ್ತಾಪವಾಗಿತ್ತು, ರಾಜ್ಯ ಸರ್ಕಾರ ಈ ಕುರಿತು ಸೂಕ್ತ ಉತ್ತರ ನೀಡಲಿ ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

- Advertisement - 

 

 

 

 

Share This Article
error: Content is protected !!
";