ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಸಮಾಜ ಸುಧಾರಕ ಮಹಾಮಾನವತಾವಾದಿ ಬಸವಣ್ಣನವರ ಜಯಂತಿಯ ಹಿನ್ನೆಲೆಯಲ್ಲಿ ಅವರ ವಿಚಾರಧಾರೆಗಳನ್ನು ಈಗಿನ ಪೀಳಿಗೆ ಅಧ್ಯಯನ ಮಾಡುವ ಮತ್ತು ಆ ಅಧ್ಯಯನ ಜ್ಞಾನವು ಸದಾ ಮನಸ್ಸಿನಲ್ಲಿರಲಿ ಎನ್ನುವ ಕಾರಣದಿಂದ ಮಾಧ್ಯಮಿಕ ಹಂತದಿಂದ ಸ್ನಾತಕೋತ್ತರ ತರಗತಿಗಳವರೆಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆ ಹಾಗೂ ವಿವರ : ೧) ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ – ವಿಷಯ: ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ, ೨) ಪ್ರೌಢಶಾಲಾ ವಿದ್ಯಾರ್ಥಿಗಳಿಗೆ – ವಿಷಯ: ಬಸವಣ್ಣನವರ ಮೌಢ್ಯ ವಿರೋಧಿನಿಲುವು, ೩) ಪಿಯುಸಿ, ಐಟಿಐ, ಡಿಪ್ಲೊಮಾ, ಡಿ.ಎಡ್. ಇತರ ತರಗತಿಗಳವರಿಗೆ – ವಿಷಯ: ಬಸವಣ್ಣನವರ ಸಮ ಸಮಾಜ, ೪) ಪದವಿ ಹಾಗೂ ಸಮಾನಾಂತರ ತರಗತಿಗಳ ವಿದ್ಯಾರ್ಥಿಗಳಿಗೆ – ವಿಷಯ: ಸಮಕಾಲೀನ ಶರಣರು ಕಂಡ ಬಸವಣ್ಣ, ೫) ಸ್ನಾತಕೋತ್ತರ ತರಗತಿಗಳವರಿಗೆ – ವಿಷಯ: ಬಸವಣ್ಣನವರ ಚಿಂತನೆಗಳಲ್ಲಿ ಭಾರತೀಯ ಸಂವಿಧಾನ. ಪ್ರಬಂಧ ಬರೆಯುವವರು ಸಂಬಂಧಿಸಿದ ವಚನಗಳನ್ನು ಉಲ್ಲೇಖಿಸಬಹುದಾಗಿದೆ.
ಸ್ಪರ್ಧೆ ನಿಯಮಗಳು:- * ಪ್ರಬಂಧವು ಕನ್ನಡದಲ್ಲಿರಬೇಕು ಮತ್ತು ವಿಷಯಾಂತರವಾಗಿರಬಾರದು, * ಪ್ರಬಂಧವು ಸ್ವಂತ ರಚನೆಯಾಗಿರಬೇಕು. ಇತರರ ಬರಹದ ನಕಲು ಆಗಿರಬಾರದು ಬೇರೆಯವರ ಅಭಿಪ್ರಾಯ ಉಲ್ಲೇಖಿಸಿದಲ್ಲಿ ಆ ವ್ಯಕ್ತಿಗಳ ಉಲ್ಲೇಖವಿರಬೇಕು. * ಪ್ರಬಂಧವು ೧೦೦೦ (ಸಾವಿರ) ಪದಗಳಿಗೆ ಮೀರಿರಬಾರದು ಮತ್ತು ಎ೪ ಗಾತ್ರದ ಬಿಳಿ ಹಾಳೆ ಬಳಸಿರಬೇಕು. *
ಅಕ್ಷರಗಳು ಸ್ಪಷ್ಟವಾಗಿ, ಅಂದವಾಗಿ, ವ್ಯಾಕರಣ ದೋಷವಿಲ್ಲದ ಹಾಗೂ ವಸ್ತುಷ್ಠ ಅಂದವಾದ ಬರವಣಿಗೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ನೀಲಿ ಅಥವಾ ಕಪ್ಪು ಶಾಯಿಯಲ್ಲಿರಬೇಕು. * ಪ್ರಬಂಧದೊಂದಿಗೆ ಸ್ಪಷ್ಟ ಅಧಿಕೃತ ವಿಳಾಸ ದೂರವಾಣಿ ಸಂಖ್ಯೆ, ಶಾಲಾ ಕಾಲೇಜುಗಳ ವಿವರಗಳನ್ನು ಲಗತ್ತಿಸಿರಬೇಕು.
* ನಿಗದಿತ ಅಂತಿಮ ದಿನಾಂಕದೊಳಗೆ ಪ್ರಬಂಧವನ್ನು ಸಲ್ಲಿಸಬೇಕು ಹಾಗೂ ಲೇಖನದ ಒಂದು ಪ್ರತಿಯನ್ನು ಕಾಯ್ದಿರಿಸಿಕೊಳ್ಳುವುದು. * ತಡವಾಗಿ ಬಂದ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ. * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. * ಪ್ರಬಂಧ ತಲುಪಲು ಕಡೆಯ ದಿನಾಂಕ ೧೨-೪-೨೦೨೬ ಆಗಿರುತ್ತದೆ. * ಆಯ್ಕೆಯಾದವರಿಗೆ ಸೂಕ್ತ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು.
* ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು. * ಆಸಕ್ತರು ಯಾರೇ ಆದರೂ ಮೇಲ್ಕಾಣಿಸಿದ ವಿಷಯ ಹಾಗೂ ವಯೋಮಾನಾನುಸಾರವಾಗಿ ಪ್ರಬಂಧ ಬರೆದು ಸಂಯೋಜಕರು, ಬಸವ ಜಯಂತಿ ಪ್ರಬಂಧ ಸ್ಪರ್ಧೆವಿಭಾಗ, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಂ.ಕೆ.ಹಟ್ಟಿ-ಅಂಚೆ, ಚಿತ್ರದುರ್ಗ- ೫೭೭೫೦೨ ಈ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಪ್ರಬಂಧಗಳನ್ನು ಕಳುಹಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ೯೪೪೮೬೬೪೯೩೨ ಸಂಪರ್ಕಿಸಲು ಶ್ರೀಮಠದ ಪ್ರಕಟಣೆ ಕೋರಿದೆ.

