ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಸ್ಥಿರ ಇಂಧನ ಕಂಪನಿಯಾದ ಮ್ಯಾಶ್ ಮೇಕ್ಸ್ ಜೊತೆ ನಡೆಸಿರುವ ಮಹತ್ವದ ಸಭೆ ಫಲಪ್ರದವಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಹಸಿರು ಇಂಧನ ಪರಿಹಾರಗಳಲ್ಲಿ ಪ್ರವರ್ತಕರಾದ ಡೆನ್ಮಾರ್ಕ್ ದೇಶದ ಮ್ಯಾಶ್ ಮೇಕ್ಸ್ ಜೊತೆ ಫಲಪ್ರದ ಸಭೆ ನಡೆಸಲಾಯಿತು. ಅವರು 100 ಕೋಟಿ ಹೂಡಿಕೆಯೊಂದಿಗೆ ಗೋಡಂಬಿ ಉಳಿಕೆಗಳನ್ನು ಬಳಸಿ ಭಾರತದ ಮೊದಲ ಹೈಟೆಕ್ ಬಯೋಚಾರ್ ಪ್ಲಾಂಟ್ ಅನ್ನು ಉಡುಪಿಯಲ್ಲಿ ಸ್ಥಾಪಿಸುತ್ತಿದ್ದಾರೆ. ಅವರ ಯೋಜನೆಗಳಿಗೆ ಬೆಂಬಲ, ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿತು.
#MashMakes ಕರ್ನಾಟಕದಲ್ಲಿ ಕಾರ್ಯನಿರ್ವಹಿಸಲು ಸಕಾರಾತ್ಮಕ ನಿಲುವು ಹೊಂದಿದ್ದು, ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಲು ಉತ್ಸುಕರಾಗಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.