ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
60% ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್‌ಇಲ್ಲದೇ ಒಂದು ಹುಲ್ಲುಕಡ್ಡಿಯೂ ಸಹ ಅಲುಗಾಡುವುದಿಲ್ಲ ! ಎಂದು ಜೆಡಿಎಸ್ ದೂರಿದೆ.
ನುಂಗುಬಾಕ ಸಚಿವ ಡಾ.ಸುಧಾಕರ್ ಚಿಂತಾಮಣಿ ಕ್ಷೇತ್ರದಲ್ಲಿ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಬೇಕಾದರೆ 10% ಲಂಚ ಕೇಳುತ್ತಿದ್ದಾರೆ.
ಪರ್ಸಂಟೇಜ್ ಕೊಡದಿದ್ರೆ ಗುತ್ತಿಗೆದಾರರ ಟೆಂಡರ್ ಅನ್ನೇ ರದ್ದು ಮಾಡುವ ಬೆದರಿಕೆಯನ್ನು ಹಾಕಿ ಸಚಿವ ಎಂ.ಸಿ. ಸುಧಾಕರ್ ಕಮಿಷನ್‌ವಸೂಲಿ ಮಾಡುತ್ತಿದ್ದಾರೆ ಎಂದು ಮಾಜಿ ಉಪಸಭಾಪತಿಗಳು ಹಾಗೂ ಮಾಜಿ ಶಾಸಕರಾದ ಜೆಕೆ ಕೃಷ್ಣಾರೆಡ್ಡಿ ಆರೋಪಿಸಿರುವುದು ಭ್ರಷ್ಟಾತೀ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ರಾಜಕಾರಣಕ್ಕೆ ಮತ್ತೊಂದು ನಿದರ್ಶನ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.