ಸತ್ಯಸಾಯಿ ಬಾಬಾ ಭೌತಿಕವಾಗಿ ಇಲ್ಲದಿದ್ದರೂ ಅವರ ಪ್ರೀತಿ ನಮ್ಮೊಂದಿಗಿದೆ-ಮೋದಿ

News Desk

ಚಂದ್ರವಳ್ಳಿ ನ್ಯೂಸ್, ಪುಟ್ಟಪರ್ತಿ(ಆಂಧ್ರ ಪ್ರದೇಶ):
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಗೆ ಬುಧವಾರ ಭೇಟಿ ನೀಡಿ ಶ್ರೀ ಸತ್ಯಸಾಯಿ ಬಾಬಾ ಅವರ ಮಹಾಸಮಾಧಿಯ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪುಟ್ಟಪರ್ತಿಗೆ ಭೇಟಿ ನೀಡುವ ಮುನ್ನ ಬೃಹತ್ ರೋಡ್ ಶೋ ನಡೆಸಿ ಗಮನ ಸೆಳೆದರು.

ಪುಟ್ಟಪರ್ತಿಯಲ್ಲಿ ಪ್ರಧಾನಿ ಮೋದಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ. ಸತ್ಯಸಾಯಿ ಬಾಬಾ ಇಂದು ಭೌತಿಕವಾಗಿ ಇಲ್ಲದಿದ್ದರೂ ಅವರ ಪ್ರೀತಿ ನಮ್ಮೊಂದಿಗಿದೆ ಎಂದು ಹೇಳಿದರು.
ಅವರ ಸೇವೆ ಭಾರತೀಯ ನಾಗರಿಕತೆಯ ಮೂಲತತ್ವ. ಭಕ್ತಿ
, ಜ್ಞಾನ ಮತ್ತು ಕರ್ಮ ಎಲ್ಲವೂ ಸೇವೆಗೆ ಸಂಬಂಧಿಸಿದ್ದೇ ಆಗಿವೆ.

- Advertisement - 

ಈ ನಿಟ್ಟಿನಲ್ಲಿ ಬಾಬಾ ಅವರ ಬೋಧನೆಗಳು ಲಕ್ಷಾಂತರ ಜನರಿಗೆ ದಾರಿ ತೋರಿಸಿವೆ. ಎಲ್ಲರನ್ನೂ ಪ್ರೀತಿಸಿ ಮತ್ತು ಎಲ್ಲರ ಸೇವೆ ಮಾಡಿ ಎಂಬುದು ಬಾಬಾ ಅವರ ಧ್ಯೇಯವಾಗಿದೆ. ಅವರ ಬೋಧನೆಗಳ ಪ್ರಭಾವ ದೇಶಾದ್ಯಂತ ಗೋಚರಿಸುತ್ತದೆ ಎಂದು ಮೋದಿ ಅವರು ತಿಳಿಸಿದರು.

ಮೋದಿ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ವಿಡಿಯೋ ವೈರಲ್:
ಪುಟ್ಟಪರ್ಥಿಯಲ್ಲಿ ನಡೆದ ಸತ್ಯ ಸಾಯಿ ಬಾಬಾ ಜನ್ಮದಿನಾಚರಣೆಯಲ್ಲಿ ಖ್ಯಾತ ನಟಿ ಐಶ್ವರ್ಯ ರೈ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸೀನರಾಗಿದ್ದ ಸ್ಥಳಕ್ಕೇ ಹೋಗಿ ಮೋದಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮೋದಿ ಅವರು ಐಶ್ವರ್ಯ ರೈ ಅವರ ತಲೆಮೇಲೆ ಕೈ ಇರಿಸಿ ಆಶೀರ್ವಾದ ಮಾಡಿದ್ದಾರೆ.

- Advertisement - 

ನಟಿ ಐಶ್ವರ್ಯಾ ರೈ ಕಾಲಿಗೆ ನಮಸ್ಕರಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಇದೇ ವೇದಿಕೆಯಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ನಂತರ ಮೋದಿ ಉಪಸ್ಥಿತಿಗೆ ಧನ್ಯವಾದ ಅರ್ಪಿಸಿ ಐಶ್ವರ್ಯ ರೈ ಮಾನವೀಯತೆಯ ಕುರಿತು ಮಾತನಾಡಿ, ಸಾಯಿ ಬಾಬಾ ಸಂದೇಶ ಸ್ಮರಿಸಿದರು. ಜಗತ್ತಿನಲ್ಲಿ ಒಂದೇ ಜಾತಿ ಇರುವುದು, ಅದುವೇ ಮಾನವೀಯತೆ. ಒಂದೇ ಧರ್ಮ ಇರೋದು ಅದುವೇ ಪ್ರೀತಿ. ಒಂದೇ ಭಾಷೆ ಇರೋದು ಅದುವೆ ಹೃದಯದ ಭಾಷೆ. ದೇವ ಒಬ್ಬನೇ, ಅವನು ಸರ್ವವ್ಯಾಪಿ ಎಂದು ಐಶ್ವರ್ಯ ರೈ ಹೇಳುವ ಮೂಲಕ ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವರು ಸಂತೋಷ ಹೊರಹಾಕಿದರು. ಈ ವಿಶೇಷ ಸಂದರ್ಭದಲ್ಲಿ ಇಂದು ನಮ್ಮೊಂದಿಗೆ ಇದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಐಶ್ವರ್ಯ ರೈ ಹೇಳಿದರು.
ನಿಮ್ಮ ಇಲ್ಲಿನ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಸ್ಫೂರ್ತಿ ನೀಡುತ್ತದೆ. ನಿಜವಾದ ನಾಯಕತ್ವವೇ ಸೇವೆ. ಮನುಷ್ಯನಿಗೆ ಸೇವೆ ಮಾಡುವುದು ದೇವರಿಗೆ ಸೇವೆ ಮಾಡಿದಂತೆ ಎಂಬ ಸಾಯಿಬಾಬಾ ಅವರ ಮಾತನ್ನು ನೆನಪಿಸುತ್ತದೆ
ಎಂದು ಐಶ್ವರ್ಯ ರೈ ಹೇಳಿದರು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯ ರೈ ಬಚ್ಚನ್, ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಆರ್.ಜೆ.ರತ್ನಾಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

Share This Article
error: Content is protected !!
";