ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅರಿವು ಅಗತ್ಯ:ಎಂ.ಆರ್ ರಂಗಸ್ವಾಮಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜದಲ್ಲಿನ ಆಗುಹೋಗುಗಳ ತಿಳುವಳಿಕೆಗಾಗಿ ಮತ್ತು ಭದ್ರತೆಯ ಜೀವನ ನಡೆಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ತಾಲೂಕು ವಕೀಲ ಸಂಘದ ಅಧ್ಯಕ್ಷ ಎಂ. ಆರ್. ರಂಗಸ್ವಾಮಿ ಹೇಳಿದರು.

ತಾಲೂಕಿನ ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಮತ್ತು ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜು ಭೀಮನಬಂಡೆ ಮಸ್ಕಲ್, ಹಿರಿಯೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

- Advertisement - 

ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣದ ಪತ್ರದವರೆಗೂ ಪ್ರತಿಯೊಬ್ಬ ನಾಗರೀಕರು ಕಾನೂನು ತಿಳಿದುಕೊಂಡಿರಬೇಕು. ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಕಾನೂನುಗಳು ಅತ್ಯವಶ್ಯಕ ಎಂದರು.
ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀನಿವಾಸಮೂರ್ತಿ ಯುವಕರಿಗೆ ಕರೆ ನೀಡಿದರು.

ಸಿನಿಮಾ ನಟರು, ಕ್ರಿಕೆಟ್ ಆಟಗಾರರು ಯುವ ಜನಾಂಗಕ್ಕೆ ಆದರ್ಶವಲ್ಲ ಸರಿಯಾದ ಮಾರ್ಗದರ್ಶನವನ್ನು ತೋರಿಸುವ ಮಹಾನಾಯಕರು ಯುವಕರಿಗೆ ಆದರ್ಶ. ಜೀವನದಲ್ಲಿ ಯುವಕರಿಗೆ ನಿರುತ್ಸಾಹವಿರಬಾರದು ಉತ್ಸಾಹವಿರಬೇಕು ಎಂದರು.

- Advertisement - 

ರಾಷ್ಟ್ರೀಯ ಯುವ ದಿನಾಚಾರಣೆ ಕಾಲೇಜುಗಳಲ್ಲಿ ಆಚರಿಸಲು ಶ್ರೀ ಸ್ವಾಮಿ ವಿವೇಕಾನಂದರೇ ಸ್ಪೂರ್ತಿ, ಬಾಲ್ಯದಿಂದಲೇ ಆಧ್ಯಾತ್ಮ ನಾಯಕತ್ವ ಧೈರ್ಯದ ಗುಣಗಳನ್ನು ತನ್ನ ತಾಯಿ ಭುವನೇಶ್ವರಿ ವಿವೇಕಾನಂದರಿಗೆ ತಿಳಿಸಿದ್ದರು. ನರೇಂದ್ರ ದತ್ತ ಪ್ರಖ್ಯಾತ ವಕೀಲರಾಗಬೇಕು ಎಂದು ಪೋಷಕರ ಆಸೆ ಇತ್ತು ಆದರೆ ಧರ್ಮದ, ಆಧ್ಯಾತ್ಮದ ಕುದುರೆ ಓಡಿಸುವ ಸಾರಥಿ ಆಗಬೇಕು ಎಂದು ತಂದೆ ವಿಶ್ವನಾಥ ದತ್ತ ವಿವೇಕಾನಂದರಿಗೆ ಆಶೀರ್ವದಿಸಿದರು.

ತಮ್ಮ ಬಾಲ್ಯದಲ್ಲಿ ತಪ್ಪುಗಳನ್ನು ಖಂಡಿಸುವ ಶಕ್ತಿ ವಿವೇಕಾನಂದರಿಗೆ ಇತ್ತು. ಮಹಾ ನಾಯಕರುಗಳ ಮುಂಚೂಣಿಯಲ್ಲಿ ಸ್ವಾಮಿ ವಿವೇಕಾನಂದರು ಇರುತ್ತಾರೆ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಾನೂನು ಸಲಹೆಗಾರರು ವಕೀಲರ ಸಂಘದ ಶ್ರೀ ಮಹಾಲಿಂಗಪ್ಪ ತಿಳಿಸಿದರು. ಹಾಗೂ ಇಂದಿನ ಯುವ ಜನತೆಗೆ ತಮ್ಮ ತಮ್ಮ ಕಾನೂನುಗಳ ಅರಿವು ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಳಿದರು.

ಸಹಾಯಕ ಕಾನೂನು ನೆರವು ಅಭಿಕ್ಷಕಿ ಸೋಮ ಮಾತನಾಡಿ ಸ್ವಾಮಿ ವಿವೇಕಾನಂದರ ಭಾಷಣ ಇನ್ನು ಚಿರಪರಿಚಿತವಾಗಿದೆ. ವೇದಾಂತ, ಅದ್ವೈತ, ಸಿದ್ದಾಂತಗಳನ್ನು ಶ್ರೀ ಸ್ವಾಮಿ ವಿವೇಕಾನಂದರು ತಿಳಿದು ಭಾರತೀಯರು ಅತಿ ಬುದ್ಧಿವಂತರು ಎಂದು ಬ್ರಿಟಿಷರಿಗೆ ತಮ್ಮ ವ್ಯಕ್ತಿತ್ವದ ಮೂಲಕ ತಿಳಿಸಿಕೊಟ್ಟರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ಗಾಂಧೀ ದೇಶಕ್ಕಾಗಿ ದುಡಿದರು, ನಾವು ಗಾಂಧಿ ನೋಟಿಗಾಗಿ ದುಡಿಯುತ್ತೇವೆ ಎಂದು ತಿಳಿಸಿದರು.

ವಿದ್ಯಾರ್ಥಿನಿ ಅರ್ಚಿತಾ ಪ್ರಾರ್ಥಿಸಿದರು. ಉಪನ್ಯಾಸಕ ಹರ್ಷ ನಿರೂಪಿಸಿದರು. ಶಿವಾನಂದ ಸ್ವಾಗತಿಸಿದರು. ಉಪನ್ಯಾಸಕ ವೇಣುಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ಪ್ರಶಾಂತ್, ಉಪನ್ಯಾಸಕರಾದ ನರಸಿಂಹಮೂರ್ತಿ, ವರದೇಗೌಡ, ಪ್ರವೀಣ್, ಸುಗುಣ, ನೇತ್ರ, ವಿದ್ಯಾ , ಅನುಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Share This Article
error: Content is protected !!
";