ಹಬ್ಬಗಳಿಂದ ಪ್ರತಿ ಗ್ರಾಮ ಪ್ರೀತಿಸಲು ಸಾಧ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗ್ರಾಮಗಳ ಹಬ್ಬ ಸಂಸ್ಕೃತಿ ಮತ್ತು ಸಾಹಿತ್ಯ ಮಹತ್ವ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿತು.

ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ರಾಜೇಶ್ ಹೆಬ್ಬಸೂರು ಉದ್ಘಾಟಿಸಿ ಮಾತನಾಡಿ ಹಬ್ಬಗಳು ಮನುಷ್ಯನಿಗೆ ಸಂತೋಷವನ್ನು ಮತ್ತು ಸಂಭ್ರಮವನ್ನು ಹೆಚ್ಚಿಸುತ್ತದೆ. ಹಬ್ಬಗಳಿಂದ ನಾವೆಲ್ಲರೂ ಪ್ರತಿ ಗ್ರಾಮವನ್ನು ಪ್ರೀತಿಸಬಹುದು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ ಗ್ರಾಮ ದೇವತೆಗಳ ಇತಿಹಾಸ ಸಂಸ್ಕೃತಿ, ಪರಂಪರೆಯನ್ನು ತಿಳಿಯಲು ಇಂತಹ ಕಾರ್ಯಕ್ರಮಗಳು ಸಹಾಯವಾಗುತ್ತದೆ ಎಂದರು.

- Advertisement - 

 ಶ್ರೀರಾಮ ಶೇಷ ಪಾಠಶಾಲೆಯ ಪ್ರಾಚಾರ್ಯ ಪ್ರದೀಪ್ ಕುಮಾರ್ ದೀಕ್ಷಿತ್ ಮಾತನಾಡಿ ಹಬ್ಬಗಳು ನಮ್ಮ ಸಂಸ್ಕೃತಿಯನ್ನು ತಿಳಿಯಲು ಸಹಾಯವಾಗುತ್ತದೆ. ಪ್ರತಿ ಊರಿಗೂ ತನ್ನದೇ ಆದ ಇತಿಹಾಸ, ಆಚರಣೆ ,ರೂಢಿ, ಸಂಪ್ರದಾಯಗಳು ಸಾವಿರಾರು ವರ್ಷಗಳಿಂದ ಬಂದಿದೆ. ನಮ್ಮ ಇತಿಹಾಸದ ಪುಟಗಳಲ್ಲಿ ದಾಖಲೆಗಳಾಗಿವೆ. ನಮ್ಮ ಪೂರ್ವಿಕರು ಶ್ರದ್ಧೆ ಭಕ್ತಿಯಿಂದ ಗ್ರಾಮಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ .ಗ್ರಾಮಗಳ ಏಕತೆ ಭಾವೈಕ್ಯತೆ ಪರಸ್ಪರ ಅರಿವು ಹಬ್ಬಗಳಿಂದ ಸಾಧ್ಯವಾಗಿದೆ. ಹಬ್ಬಗಳು ಸದಾ ನಿರಂತರ ಇತ್ತೀಚೆಗೆ ಹಬ್ಬಗಳು ವೈಭವದಿಂದ ಸಡಗರದಿಂದ ನಡೆಯುತ್ತಿರುವ ಸಂದರ್ಭದಲ್ಲಿ ಇತಿಹಾಸ ತಿಳಿಯುವಂತಹ ಕಾರ್ಯಕ್ರಮ ರೂಪಿಸಿರುವುದು ಉತ್ತಮವೆಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಗಳ ಹಬ್ಬಗಳು ಗ್ರಾಮದ ಉನ್ನತಿ ಅಭಿವೃದ್ಧಿ ಹಾಗೂ ಸಂಸ್ಕೃತಿ ಪರಂಪರೆಯ ಜೀವಂತಿಕೆಯ ಪ್ರತೀಕ. ಗ್ರಾಮಗಳ ಹಬ್ಬಗಳು ಊರಿನ ರಕ್ಷಣೆಯ ಹಬ್ಬವಾಗಿದೆ. ಊರು ತಾಯಿಗೆ ಪ್ರತಿಯೊಬ್ಬರ ಗೌರವಯತ ಭಕ್ತಿ, ನಿಷ್ಠೆ ,ಶ್ರದ್ಧೆ ಹಾಗೂ ಕುಟುಂಬಗಳ ಅಭಿವೃದ್ಧಿ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ನಡೆಯುವ ಪರಂಪರೆಯ ಕಾರ್ಯವಾಗಿದೆ ಎಂದರು.

- Advertisement - 

ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಚಾಮರಾಜನಗರದಲ್ಲಿ ಹಲವಾರು ದೇವಾಲಯಗಳು ಸ್ಥಾಪಿತವಾಗಿದೆ. ಪ್ರತಿ ದೇವಾಲಯವು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು ತಮ್ಮ ಎಲ್ಲಾ ದುಃಖಗಳನ್ನು ನಿವಾರಿಸಿಕೊಳ್ಳುವ ಸುಖ ಸಂತೋಷ ನೆಮ್ಮದಿಯಿಂದ ಬದುಕುವ ಕೇಂದ್ರಗಳಾಗಿವೆ. ಮಂಡಿ ಮಾರಮ್ಮ ಮುದುಕ ಮಾರಮ್ಮ,.ಆದಿಶಕ್ತಿ, ರಂಗನಾಥ ಸ್ವಾಮಿ, ಗಣಪತಿ, ಚಾಮರಾಜೇಶ್ವರ ವೀರಭದ್ರೇಶ್ವರ ಶ್ರೀಕಂಠೇಶ್ವರ ಆಂಜನೇಯ ಮುಂತಾದ ದೇವಾಲಯಗಳು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಅದರ ಅರಿವಿನ  ಹೆಚ್ಚಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿ ರವರು ಗ್ರಾಮ ಹಬ್ಬದ ದಿನ ಸಂಸ್ಕೃತಿ, ಸಾಹಿತ್ಯದ ಹಾಗೂ ಗಾಯನ ರೂಪಿಸಿರುವುದು ವಿಶೇಷ ಎಂದರು.

ಕಾರ್ಯಕ್ರಮದಲ್ಲೇ ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್ ಸರಸ್ವತಿನಿವೃತ್ತ ಶಿಕ್ಷಕಿ ಗೀತಾ, ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಸುರೇಶ್ ಗೌಡ, ಮಹದೇವಪ್ಪ ನಂಜುಂಡ ನಾಯಕ ,ವೀರಭದ್ರ, ಜಾನಕಮ್ಮ ,ಮಂಗಳಮ್ಮ  ಇದ್ದರು.

 

 

Share This Article
error: Content is protected !!
";