ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ-ಮುಖ್ಯಮಂತ್ರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕ ಜಯಂತಿ ಅಂಗವಾಗಿ ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಜ್ಯದ ಜನತೆಗೆ ಕನಕ ಜಯಂತಿಯ ಶುಭ ಕೋರಿದರು.

ಜಾತಿ-ಕುಲ ಸೃಷ್ಟಿಸಿರುವ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆ ಬಗ್ಗೆ ಕೀರ್ತನೆ-ಕಾವ್ಯಗಳ ಮೂಲಕ ಜನಜಾಗೃತಿಗೊಳಿಸಿದ್ದ ಕನಕ ದಾಸರು ದಾಸಶ್ರೇಷ್ಠರು ಮಾತ್ರವಲ್ಲ, ಒಬ್ಬ ಅಪೂರ್ವ ಸಮಾಜ ಸುಧಾರಕರಾಗಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಾತಿ-ಧರ್ಮದ ದುರ್ಬಳಕೆಯಿಂದಾಗಿ ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿದೆಯೇನೋ ಎನ್ನುವ ಆತಂಕ ಕಾಡುತ್ತಿರುವ ಇಂದಿನ ದಿನಗಳಲ್ಲಿ ಕನಕದಾಸರ ಚಿಂತನೆ ನಮ್ಮ ದಾರಿಯ ಬೆಳಕಾಗಬೇಕು ಎಂದು ಸಿಎಂ ತಾಕೀತು ಮಾಡಿದರು.
ಕವಿ, ದಾರ್ಶನಿಕ, ಮಹಾನ್ ಮಾನವತಾವಾದಿ ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";