ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರಕ್ಕಾಗಿ ಘೋಷಿಸಿದ ಅವೈಜ್ಞಾನಿಕ ಗ್ಯಾರಂಟಿ ಭಾರ ಹೊರಲಾಗದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೇರೆ ಬೇರೆ ಮೂಲಗಳಿಂದ ಹಣ ಮಾಡುವ ಕಾಯಕದಲ್ಲಿ ನಿರತವಾಗಿದೆ. ಹಾಲಿನ ದರ, ವಿದ್ಯುತ್ ದರ, ಪೆಟ್ರೋಲ್–ಡೀಸೆಲ್ದರ, ಮುದ್ರಾಂಕ ಶುಲ್ಕ, ಜನನ ಮರಣ ಪ್ರಮಾಣ ಪತ್ರ ಶುಲ್ಕ, ಬಸ್ ದರ ಏರಿಕೆ ಬೆನ್ನಲ್ಲೇ ಮೆಟ್ರೊ ಪ್ರಯಾಣ ದರವೂ ದುಬಾರಿ ಆಗಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಮೆಟ್ರೋ ಇತಿಹಾಸದಲ್ಲೇ ಟಿಕೆಟ್ ದರ ಅತ್ಯಧಿಕ ಶೇ. 46 ರಷ್ಟು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಲೂಟಿ ಹೊಡೆಯಲು ಮುಂದಾಗಿದೆ. ಎಲ್ಲಾ ಅಗತ್ಯ ಸರಕು – ಸೇವೆಗಳ ಬೆಲೆ ಏರಿಸಿ ದುಡಿಯುವ ವರ್ಗದ ಜನರ ರಕ್ತವನ್ನು ಸಿದ್ದರಾಮಯ್ಯ ಸರ್ಕಾರ ಹೀರುತ್ತಿದೆ.
ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದು ಬೆಲೆ ಏರಿಕೆ ಮಾಡುತ್ತಿರುವುದೇ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.