ರೈತರ ಏಳ್ಗೆಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಕೃಷಿ ಕ್ಷೇತ್ರದ ಪ್ರಗತಿ ಹಾಗೂ ಶ್ರೇಯೋಭಿವೃದ್ಧಿಗೆ ಸಹಕರಿಸುವ ದೃಷ್ಟಿಯಿಂದ ರೈತರೊಂದಿಗೆ ನೇರ ಸಂವಾದ
, ವೈಜ್ಞಾನಿಕ ತಂಡದವರ ಭಾಗವಹಿಸುವಿಕೆ, ನವೀನ ತಂತ್ರಜ್ಞಾನಗಳು, ಸರ್ಕಾರಿ ಯೋಜನೆಗಳ  ಮಾಹಿತಿ, ರೈತರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು ಮತ್ತು

ಹೊಸ ಆವಿಷ್ಕಾರಗಳ ದಾಸ್ತಾವೇಜು ಇಂತಹ ಅತ್ಯತ್ತಮ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ವಿಕಸಿತ ಕೃಷಿ ಸಂಕಲ್ಪ ಅಭಿಯಾನಆರಂಭಿಸಿದೆ ಎಂದು ವಿಪ ಸದಸ್ಯ ಸಿ.ಟಿ ರವಿ ತಿಳಿಸಿದರು.

ಇದರ ಹಿನ್ನೆಲೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಜಿಲ್ಲೆಯ ಉದ್ದೇಬೋರನಹಳ್ಳಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಆಯೋಜನೆಗೊಂಡಿದ್ದು  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ರೈತರೊಂದಿಗೆ ಅಭಿಯಾನದ ಉದ್ದೇಶ, ಸಹಕಾರ, ಸದ್ಭಳಕೆ ಕುರಿತು ಚರ್ಚೆ ಸಮಾಲೋಚನೆ ನಡೆಸಲಾಯಿತು ಎಂದು ಸಿಟಿ ರವಿ ಅವರು ತಿಳಿಸಿದರು.

 

Share This Article
error: Content is protected !!
";