ರಾಷ್ಟ್ರಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅಬಕಾರಿ ಇನ್ಸ್ ಪೆಕ್ಟರ್ ರಾಘವೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಖಿಲ ಭಾರತ ನಾಗರಿಕ ಸೇವಾ ಕ್ರಿಕೆಟ್ ತಂಡಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಘವೇಂದ್ರ .ಬಿ.ವಿ
,ಅಬಕಾರಿ ಇನ್ಸ್ಪೆಕ್ಟರ್ , ದೊಡ್ಡಬಳ್ಳಾಪುರ ವಲಯ ಇವರು ಆಯ್ಕೆಯಾಗಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಜಾಹಿರಾ ಗಟ್ಟಿನ ಮಹಾಲ ತಿಳಿಸಿದ್ದಾರೆ.

 ದೆಹಲಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರಿಕೆಟ್ ತಂಡದ ಕ್ರಿಕೆಟ್ ತಂಡದ ಕೋಚ್ ಹಾಗೂ ವ್ಯವಸ್ಥಾಪಕ ಸೇರಿ 18 ಕ್ರೀಡಾಪಟುಗಳಲ್ಲಿ ರಾಘವೇಂದ್ರ ಬಿವಿ ಆಯ್ಕೆಯಾಗಿದ್ದುರಾಜ್ಯದ ವಿವಿಧ ತಂಡಗಳಲ್ಲಿ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಆಯ್ಕೆ ಮಾಡಲಾಗಿದ್ದುಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಅಬಕಾರಿ ಇಲಾಖೆಯ ದೊಡ್ಡಬಳ್ಳಾಪುರ ಅಬಕಾರಿ ಇನ್ಸ್ಪೆಕ್ಟರ್ ರಾಘವೇಂದ್ರ ಬಿ.ವಿ ಆಯ್ಕೆಯಾಗಿದ್ದಾರೆ, ಇದೇ ಮೊದಲ ಬಾರಿಗೆ ಅವರು ರಾಷ್ಟ್ರಮಟ್ಟದ  ಕ್ರಿಕೆಟ್ ಲೀಗ್  ನಲ್ಲಿ ಭಾಗವಹಿಸುತ್ತಿದ್ದಾರೆ.

 ಅಬಕಾರಿ ಇನ್ಸ್ಪೆಕ್ಟರ್ ರಾಘವೇಂದ್ರ.ಬಿ.ವಿ  ರಾಷ್ಟ್ರ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಕ್ಜೆ ದೊಡ್ಡಬಳ್ಳಾಪುರ ಅಬಕಾರಿ ಇಲಾಖೆಯ ಸಿಬ್ಬಂದಿ ಶುಭಕೋರಿದ್ದಾರೆ.

 

Share This Article
error: Content is protected !!
";