ವಿಶೇಷ ಎಕ್ಸ್‍ಪ್ರೆಸ್ ರೈಲು ಸೇವೆಗಳ ವಿಸ್ತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಮೈಸೂರು-ಅಜ್ಮೀರ್-ಮೈಸೂರು ವಿಶೇಷ ಎಕ್ಸ್‍ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

      ರೈಲು ಸಂಖ್ಯೆ 06281 ಮೈಸೂರುಅಜ್ಮೀರ್ ವಿಶೇಷ ಎಕ್ಸ್‍ಪ್ರೆಸ್ ರೈಲು ಈ ಮೊದಲು ನವೆಂಬರ್ 29ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು. ಈಗ ಇದರ ಸಂಚಾರವನ್ನು 2025ರ ಡಿಸೆಂಬರ್ 6 ರಿಂದ 2026ರ ಜನವರಿ 31 ರವರೆಗೆ ವಿಸ್ತರಿಸಲಾಗಿದೆ. ಇದು ಪ್ರತಿ ಶನಿವಾರದಂದು ಸಂಚರಿಸಲಿದೆ.

- Advertisement - 

      ಅದೇ ರೀತಿ, ರೈಲು ಸಂಖ್ಯೆ 06282 ಅಜ್ಮೀರ್ಮೈಸೂರು ವಿಶೇಷ ಎಕ್ಸ್‍ಪ್ರೆಸ್ ಈ ರೈಲು ಡಿಸೆಂಬರ್ 1ರವರೆಗೆ ಚಲಿಸಲು ನಿಗದಿಯಾಗಿತ್ತು. ಈಗ ಇದರ ಸಂಚಾರವನ್ನು 2025ರ ಡಿಸೆಂಬರ್ 8 ರಿಂದ 2026ರ ಫೆಬ್ರವರಿ 2ರವರೆಗೆ ವಿಸ್ತರಿಸಲಾಗಿದೆ. ಇದು ಪ್ರತಿ ಸೋಮವಾರದಂದು ಸಂಚರಿಸಲಿದೆ.

      ಈ ವಿಶೇಷ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ಸಮಯ, ನಿಲುಗಡೆಗಳು ಮತ್ತು ಕೋಚ್ ಸಂಯೋಜನೆಯೊಂದಿಗೆ ಮುಂದುವರಿಯಲಿವೆ.  ಈ ರೈಲುಗಳು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ, ಎಸ್‍ಎಸ್‍ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ರತ್ನಾಂ, ಮಂದಸೋರ್, ನಿಮಾಚ್, ಚಿತ್ತರ್ಗಡ್, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್ ನಿಲ್ದಾಣದ ಮೂಲಕ ಅಜ್ಮೀರ್  ತಲುಪಲಿದೆ.

- Advertisement - 

     ಹೆಚ್ಚಿನ ಮಾಹಿತಿಗಾಗಿ, ಹತ್ತಿರದ ರೈಲು ನಿಲ್ದಾಣದ ವಿಚಾರಣಾ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದ್ದು, ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

 

Share This Article
error: Content is protected !!
";