ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯಲ್ಲಿ 2025-26ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಟೆಕ್ಸ್‍ಟೈಲ್ ಟೆಕ್ನಾಲಜಿ ಕೋರ್ಸಿಗೆ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಪ್ರವೇಶದ ದಿನಾಂಕವನ್ನು ಜೂನ್ 30, 2025ರ ರ ವರೆಗೂ ವಿಸ್ತರಿಸಲಾಗಿದೆ.
ಕೋರ್ಸಿಗೆ ಸೇರ ಬಯಸುವವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಡಿಪ್ಲೋಮಾ ಕೋರ್ಸ್ 3 ವರ್ಷದ ಆಗಿರುತ್ತದೆ.
ಪ್ರವೇಶಕ್ಕೆ ಅಗತ್ಯ ದಾಖಲೆಗಳಾದ ಶಾಲೆಯ ಮುಖ್ಯಸ್ಥರು ದೃಡೀಕರಿಸಿದ ಎಸ್.ಎಸ್.ಎಲ್.ಸಿ/ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ, ಮೂಲ ವರ್ಗಾವಣೆ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ (5 ವರ್ಷಗಳ ಬಿ.ಇ.ಓ ರವರಿಂದ ದೃಡೀಕರಿಸಿರಬೇಕು), ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 06 ಭಾವಚಿತ್ರಗಳು, ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ, ಕನ್ನಡ/ಗ್ರಾಮೀಣ/ಹೈದ್ರಾಬಾದ್–ಕರ್ನಾಟಕ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‍ಸೈಟ್ https://gpt.karnataka.gov.in/gittbengaluru/public/ ಹಾಗೂ ಶ್ರೀಮತಿ ಉಷಾ ಎಸ್. ಪ್ರಾಂಶುಪಾಲರು ಮೊಬೈಲ್ ಸಂಖ್ಯೆ: 9481101049 ಹಾಗೂ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸಯ್ಯ.ವಿ, ಮೊಬೈಲ್ ಸಂಖ್ಯೆ: 9448705205 ಇವರನ್ನು ಸಂಪರ್ಕಿಸಬಹುದು ಅಥವಾ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.