ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿವಿಧ ಶೈಕ್ಷಣಿಕ ಸಾಲುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
2018-19 ರಿಂದ 2024-25ನೇ ಸಾಲಿನವರೆಗೆ ಪ್ರವೇಶ ಪಡೆದ ನಾನ್-ಸಿಬಿಸಿಎಸ್ ವಿದ್ಯಾರ್ಥಿಗಳು ಹಾಗೂ 2021-22 ರಿಂದ 2024-25ನೇ ಸಾಲಿನ (ಜುಲೈ/ಜನವರಿ ಆವೃತ್ತಿ) ಮತ್ತು 2025-26ನೇ ಸಾಲಿನ (ಜುಲೈ ಆವೃತ್ತಿ) ಸಿಬಿಸಿಎಸ್ ಯು.ಜಿ, ಪಿ.ಜಿ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‍ಗಳ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದ್ದು, ದಂಡ ಶುಲ್ಕವಿಲ್ಲದೆ 2026 ನೇ ಮಾರ್ಚ್ 30 ರ ಒಳಗಾಗಿ ಪಾವತಿಸಬೇಕು. ಹಾಗೂ ರೂ. 200/- ದಂಡ ಶುಲ್ಕದೊಂದಿಗೆ ಪಾವತಿಸಲು 2026 ನೇ ಏಪ್ರಿಲ್ 6 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ಮೂಲಕವೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-560026, ಕಚೇರಿ ದೂರವಾಣಿ ಸಂಖ್ಯೆ 080-2660 3664 ಅಥವಾ ಮೊಬೈಲ್ ಸಂಖ್ಯೆ 98805-26439 / 90195-26439 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

