ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ ಖಾಲಿ ಇರುವ 98 ಹುದ್ದೆಗಳಿಗೆ ನೇರ ನೇರ ನೇಮಕಾತಿ ಮುಖಾಂತರ ಭರ್ತಿಮಾಡಲು ಕೆ.ಇ.ಎ ಮುಖಾಂತರ ಪರಿಷ್ಕøತ ಅಧಿಸೂಚನೆ ಜಾಲತಾಣದಲ್ಲಿ ಹೊರಡಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೆಇಎ ದಿನಾಂಕ 17-09-2024 ರ ಪ್ರಕಟಣೆ ಸಂಖ್ಯೆ ಇಡಿ/ಕೆಇಎ/ಆಡಳಿತ/ಸಿಆರ್04/2023(ಆರ್‍ಪಿಸಿ) ರನ್ವಯ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ಈ ಮಾಹಿತಿಯನ್ನು ಕೆಇಎ ಜಾಲತಾಣ http://kea.kar.nic.in ದಿಂದ ಪಡೆದುಕೊಳ್ಳಬಹುದಾಗಿದೆ.
ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿರುವುದರಿಂದ ಜಿಟಿಟಿಸಿ ಕೇಂದ್ರದಲ್ಲಿ ಈಗಾಗಲೇ ಪ್ರಾರಭಿಸಿರುವ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 27ವರ್ಷ ದಿಂದ 30 ವರ್ಷಗಳು,
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷಗಳಿಂದ 33 ವರ್ಷಗಳಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 32 ವರ್ಷಗಳಿಂದ 35 ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮಾಡಿ ಕೆಇಎ ಮುಖಾಂತರ ದಿನಾಂಕ 17-09-20240 ಸಂ.ಇಡಿ/ಕೆಇಎ/ಆಡಳಿತ/ಸಿ.ಆರ್.04/2023(ಆರ್‍ಪಿಸಿ) ಆದೇಶ ಹೊರಡಿಸಿಲಾಗಿದೆ.
ಅಭ್ಯರ್ಥಿಗಳು ಅನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 28-09-2024 ನಿಗದಿಪಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಕೆಇಎ ಜಾಲತಾಣ http://kea.kar.nic.in ವನ್ನು ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.