2024ರ ಡಿಸೆಂಬರ್ ನಲ್ಲಿ‌ ಮರೆಯಾದ ದಿಗ್ಗಜರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ಹಾಗೂ ಮಾಜಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಅವರು ಈ ಇಬ್ಬರು ದಿಗ್ಗಜರು 92 ವರ್ಷಗಳ ಸಮಾನ ಮನಸ್ಕರು. ಕಾಂಗ್ರೆಸ್ ಪಕ್ಷದಿಂದ 2009ರ ಕೇಂದ್ರ ಸರ್ಕಾರದ ಆಡಳಿತದಲ್ಲಿನ ಒಂದೇ ಅವಧಿಯಲ್ಲಿ ದೇಶದ ಮುಂಚೂಣಿಯ ಜ್ಞಾನಿಗಳು.

ಎಸ್ ಎಂ ಕೃಷ್ಣ ಹಾಗೂ ಡಾ ಮನಮೋಹನ್ ಸಿಂಗ್ ಇಬ್ಬರು ಅಮೇರಿಕಾದಲ್ಲಿಯೇ ಉನ್ನತ ವಿದ್ಯಾಭ್ಯಾಸದ ಶಿಕ್ಷಣ ಪಡೆದ ಪ್ರತಿಭಾವಂತರು. ಸಾಮಾಜಿಕವಾಗಿ ದೇಶದ ಅಭಿವೃದ್ಧಿಗೆ ಅವರಿಬ್ಬರ ಜ್ಞಾನದ ಭಂಡಾರದ ವ್ಯಾಪ್ತಿಯನ್ನು ಸ್ಮರಿಸಬೇಕು.

ವಿದೇಶಿ ವಿನಿಮಯದ ರಾಜತಾಂತ್ರಿಕತೆಯಲಿ ಎಸ್ ಎಂ ಕೃಷ್ಣ ಅವರ ಜ್ಞಾನದಲ್ಲಿ ದೇಶದ ಆರ್ಥಿಕತೆಯನ್ನು ಮನಮೋಹನ್ ಸಿಂಗ್ ಅವರು ಬಲಿಷ್ಠಗೊಳಿಸಿದರು. ಎಸ್ ಎಂ ಕೃಷ್ಣ ಅವರು ಹಾಗೂ ಡಾ ಮನಮೋಹನ್ ಸಿಂಗ್ ಇಬ್ಬರು 2009 ಕೇಂದ್ರ ಸರ್ಕಾರದ ಆಡಳಿತದಲ್ಲಿ ರಾಜ್ಯಸಭಾ ಸಂಸದರಾಗಿದ್ದರು.

2004 ರಲ್ಲಿ ಪ್ರಥಮವಾಗಿ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರು  ಒಂದು ಮಹತ್ವದ ಸಂದರ್ಶನದಲ್ಲಿ ಎಸ್ ಎಂ ಕೃಷ್ಣ ಅವರು ಪ್ರಧಾನಿ ಸ್ಥಾನಕ್ಕೆ ನನಗಿಂತ ಸೂಕ್ತ ವ್ಯಕ್ತಿ ಎಂದು ಕೃಷ್ಣ ಅವರ ಜ್ಞಾನವನ್ನು ಕೊಂಡಾಡಿದ್ದರು.

 ಈ ವಿಚಾರದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವವನ್ನು ಆ ದಿನಗಳಲ್ಲಿ ಕೆಲವು ರಾಜಕೀಯ ಪಂಡಿತರು ಮೆಚ್ಚಿಕೊಂಡಿದ್ದರು. ಆ ವಿಚಾರವನ್ನು 2024ರ ಕೊನೆಯ ದಿನವಾದ ಇಂದು ನೆನೆಯುತ್ತೇನೆ. ಇದು ಕಥೆಯಲ್ಲ ಪ್ರತಿಭಾವಂತರ ವಿಚಾರ ವೇದಿಕೆ ಎಂದು ರಘು ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

- Advertisement -  - Advertisement - 
Share This Article
error: Content is protected !!
";