ಜಾತ್ರೆಯಲಿ ಕಂಡದ್ದು….!

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಜಾತ್ರೆಯಲಿ ಕಂಡದ್ದು….!

- Advertisement - 

ಪರಿಷೆಯಲಿ
ಎದುರಾದ ಮೊನಾಲಿಸಾರು
ಮೊನ್ನೆ ಕುಂಭಮೇಳದಿ ಕಂಡ
ಅವಳಷ್ಟು ಸುಂದರಿಯರೇನಲ್ಲ.
ಜವಾಬ್ದಾರಿಯ ಹೆಗಲಿಗೆ ದಾರದಿಂದೊಲಿದ
ಸಂಸಾರದ ನೊಗ,
ತಲೆಯ ಮೇಲಿನ ಸಂಪಾದನೆಯ ಭಾರ
ಬೆನ್ನಿಗೆ ನೇತು ಬಿದ್ದ ಕರುಳಿನ ಕನಿಕರ,……!

- Advertisement - 

ಜಾತ್ರೆಯಲಿ
ಸಂತೆಯಲಿ
ಓಣಿಯಲಿ
ದುಡಿದುಣ್ಣುವ ಖಾತ್ರಿಯಲಿ ಸಬಲೆಯರು…!

ಸಿಂದೊಳ್ಳು ದುರುಗಣ್ಣನ ಝೀರ್ ಬುರ್
ಜಾತ್ರೆಯ ಸಡಗರದ ಮತ್ತು ರಂಗೇರಿ
ಮೀಸೆ ಉರಿ ಮಾಡಲು
ಒಡಲಾಳದ ಹಸಿವು, ಭವಣೆ
ಪೌಳಿಯ ಮುಂದೆ ಕೈಚಾಚಿ ನಿಂತಿವೆ !

- Advertisement - 

ಕಾನೂನಿನ ಕುಣಿಕೆಗೆ ಸಿಕ್ಕ ಭಂಗಿಯ ಚಿಲುಮೆ
ತುಕ್ಕು ಹಿಡಿದು ತುಂಬೆಯೊಳಗಿನ ತಂಬಾಕು
ಸುರುಳಿ ಸುತ್ತಿ ಹೊಗೆಯಾಗಿದೆ
ಸಾಧುಗಳ ಕಮಂಡಲ ಗಂಗೆ
ಸುರೆಯಾಗಿ ನಶೆಯಾಗಿದೆ.!!
ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು

 

Share This Article
error: Content is protected !!
";